ಪಾಲಿಟಿಕಲ್ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ಕುರುಕ್ಷೇತ್ರ ಕಾವೇರಿರುವ ಸಂದರ್ಭದಲ್ಲಿ 31 ಜಿಲ್ಲೆಗಳ 224 ಕ್ಷೇತ್ರಗಳ ಪಾಲಿಟಿಕಲ್ ಸುದ್ದಿಗಳನ್ನು ಸಂಪೂರ್ಣವಾಗಿ ತಿಳಿಸಲಾಗಿದೆ.
ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಜೆಡಿಎಸ್ ನಾನಾ ಕಸರತ್ತನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಕುಮಾರಸ್ವಾಮಿ ಹಮ್ಮಿ ಕೊಂಡಿದ್ದ ಪಂಚರತ್ನ ಯಾತ್ರೆ ಅಂತಿಮ ಹಂತಕ್ಕೆ ಬಂದಿದೆ ಮೈಸೂರಿನಲ್ಲಿ ದಳಪತಿಗಳು ಬೃಹತ್ ಸಮಾವೇಶ ಸಮಾರೋಪ ಸಮಾರಂಭ ನಡೆಸುವ ಮೂಲಕ ಮಾರ್ಚ್ 26ರಂದು ಪಂಚರತ್ನ ಯಾತ್ರೆ ಮುಕ್ತಾಯಗೊಳಿಸಲಿದ್ದಾರೆ. ಇನ್ನು ರಾಜ್ಯ ರಾಜಕೀಯದಲ್ಲಿ ಕಳೆದ ಒಂದು ವಾರದಿಂದ ಉರಿಗೌಡ, ನಂಜೇಗೌಡ ಜಟಾಪಟಿ ಜೋರಾಗಿದ್ದು, ಕರ್ನಾಟಕದ ಚುನಾವಣೆ ಹೊತ್ತಿನಲ್ಲಿ ಈ ಎರಡು ಐತಿಹಾಸಿಕ ಪಾತ್ರಗಳು ಜೀವ ಪಡೆದಿದೆ ಇದು ರಾಜಕೀಯ ನಾಯಕರಲ್ಲಿ ವಾಕ್ ಸಮರದ ಕಿಚ್ಚು ಹೊತ್ತಿಸಿದೆ ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.