ಕೇಂದ್ರ ಬಿಜೆಪಿ ಸರ್ಕಾರ ನಿರ್ಮಿಸಿದ ರಸ್ತೆ ಉದ್ಘಾಟನೆಗೆ ಸಜ್ಜು, ಕಾಂಗ್ರೆಸ್ ಜೆಡಿಎಸ್‌ಗೆ ಬೇಕಿದೆ ಶ್ರೇಯಸ್ಸು!

Mar 9, 2023, 11:08 PM IST

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮೈಸೂರು ಹೆದ್ದಾರಿ ಘೋಷಣೆ ಮಾಡಿದರು. ರಸ್ತೆ ಸಚಿವ ನಿತಿನ್ ಗಡ್ಕರಿ, ಸಂಸದ ಪ್ರತಾಪ್ ಸಿಂಹ ಅವರ ಅವಿರತ ಪ್ರಯತ್ನದಿಂದ ಬರೋಬ್ಬರಿ 8 ಸಾವಿರ ಕೋಟಿಗೂ ಅಧಿಕ ವೆಚ್ಚದಲ್ಲಿ ದಶಪಥ ಹೆದ್ದಾರಿ ನಿರ್ಮಾಣ ಆಗಿದೆ. ಮಾರ್ಚ್ 12 ರಂದು ಪ್ರಧಾನಿ ಮೋದಿ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಆದರೆ ಈ ರಸ್ತೆಯ ನಿರ್ಮಾಣದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ. ಇದರ ಕ್ರೆಡಿಟ್ ನಮಗೆ ಸಲ್ಲಬೇಕು. ಬಿಜೆಪಿ ಸರರ್ಕಾರಕ್ಕೆ ಅಲ್ಲ ಎಂದು ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇತ್ತ ಜೆಡಿಎಸ್ ಕೂಡ ಕ್ರೆಡಿಟ್ ಪಡೆಯುವ ಪ್ರಯತ್ನ ನಡೆಸುತ್ತಿದೆ. ಈ ರಸ್ತೆ ಸಂಪೂರ್ಣ ವೆಚ್ಚವನ್ನು ಮೋದಿ ಸರ್ಕಾರ ನೀಡಿದೆ. ಯೋಜನೆ, ಕಾಮಾಗಾರಿ ಎಲ್ಲವನ್ನೂ ನಿತಿನ್ ಗಡ್ಕರಿ ಹಾಗೂ ಪ್ರತಾಪ್ ಸಿಂಹ ಉಸ್ತುವಾರಿಯಲ್ಲಿ ಆಗಿದೆ. ನೀರು ನಿಂತಾದ ಪ್ರತಾಪ್ ಸಿಂಹ ಅವರನ್ನು ಹಿಗ್ಗಾ ಮುಗ್ಗ ಜಾಡಿಸಿದ ಕಾಂಗ್ರೆಸ್ ಇದೀಗ ರಸ್ತೆ ಕ್ರಿಡಿಟ್ ವಾರ್ ಶುರು ಮಾಡಿದೆ.