ಈ ಬಾರಿ ಸಂಸದ ಪ್ರತಾಪ್ ಸಿಂಹನನ್ನು ದಯವಿಟ್ಟು ಗೆಲ್ಲಿಸಬೇಡಿ ಎಂದು ಕೈ ಮುಗಿದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ. ಭ್ರಷ್ಟ, ಕೋಮು ಸಂಘರ್ಷಕ್ಕೆ ಅವಕಾಶ ಮಾಡುವ ಬಿಜೆಪಿಯನ್ನು ದೂರವಿಡಿ ಎಂದರು.
ಮೈಸೂರು (ಆ.31): ಈ ಬಾರಿ ಸಂಸದ ಪ್ರತಾಪ್ ಸಿಂಹನನ್ನು ದಯವಿಟ್ಟು ಗೆಲ್ಲಿಸಬೇಡಿ ಎಂದು ಕೈ ಮುಗಿದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ. ಭ್ರಷ್ಟ, ಕೋಮು ಸಂಘರ್ಷಕ್ಕೆ ಅವಕಾಶ ಮಾಡುವ ಬಿಜೆಪಿಯನ್ನು ದೂರವಿಡಿ ಎಂದರು. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಡುಗೆ ಅನಿಲ ದರ ಕಡಿಮೆ ಮಾಡಿದ್ದಾರೆ. ದಯಮಾಡಿ ಮೈಸೂರಿನಲ್ಲಿ ಈ ಬಾರಿ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಬೇಡಿ ಎಂದು ಕರೆ ನೀಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಒಂಬತ್ತು ವರ್ಷ ಆಯಿತು. ಇಷ್ಟು ವರ್ಷದಲ್ಲಿ ಅವರು ಬರಿ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ. ಹಿಂದು ಮುಸ್ಲಿಂ, ಹಿಜಾಬ್, ಹಲಾಲ್ ಕಟ್ ವಿಚಾರಗಳನ್ನು ಮುಂದಿಟ್ಟು ಸಮಾಜದ ಸಾಮರಸ್ಯವನ್ನೇ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಈ ಬಾರಿ ದಯಮಾಡಿ ಮೈಸೂರಿನ ಜನ ಪ್ರತಾಪ್ ಸಿಂಹನನ್ನು ಆಯ್ಕೆ ಮಾಡಬೇಡಿ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿರುವ ವಿಡಿಯೋ ಇದಾಗಿದೆ.