Jun 23, 2023, 11:22 AM IST
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಲು ಪ್ರತಿಪಕ್ಷಗಳು ಪಣ ತೊಟ್ಟಿವೆ. ಈ ಹಿನ್ನೆಲೆ ಇಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯ ನೇತೃತ್ವವನ್ನು ಸಿಎಂ ನಿತೀಶ್ ಕುಮಾರ್ ವಹಿಸಿಕೊಂಡಿದ್ದು, ಎಲ್ಲ ವಿಪಕ್ಷಗಳ ನಾಯಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ವಿಪಕ್ಷದ ಏಕ ಅಭ್ಯರ್ಥಿ ಸ್ಪರ್ಧೆ ವಿಚಾರವೇ ಈ ಸಭೆಯಲ್ಲಿ ಪ್ರಮುಖ ವಿಚಾರವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇಂದಿನ ಸಭೆ ತುಂಬಾ ಕುತೂಹಲ ಮೂಡಿಸಲಿದ್ದು, ಯಾವ ಯಾವ ನಾಯಕರು ಭಾಗಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಭೆಯಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಚರ್ಚೆ ನಡೆಯುವ ಸಾಧ್ಯತೆಯೂ ಇದೆ.
ಇದನ್ನೂ ವೀಕ್ಷಿಸಿ: ಜೆಡಿಎಸ್ ಪಾಳಯದಲ್ಲಿ ಮತ್ತೊಮ್ಮೆ ಬಿರುಗಾಳಿ ಏಳುತ್ತಾ?: ಗೌಡರ ಕುಟುಂಬದಿಂದ ಲೋಕಸಭೆಗೆ ಯಾರೂ ಸ್ಪರ್ಧಿಸಲ್ವಂತೆ?