ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

Jul 20, 2023, 3:49 PM IST

ಬೆಂಗಳೂರಲ್ಲಿ ಸಿದ್ಧವಾದ I.N.D.I.A ರಣತಂತ್ರಕ್ಕೆ ದೆಹಲಿಯಲ್ಲೇ (Delhi) ಮಹಾರಣತಂತ್ರ ಹೆಣೆದು ಯುದ್ಧಾಹ್ವಾನ ನೀಡಿದೆ ಎನ್‌ಡಿಎ(NDA) ಈಗ ಲೋಕಸಭಾ ಕುರುಕ್ಷೇತ್ರಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಅತಿ ದೊಡ್ಡದೊಂದು ಸಂಚಲನ ಶುರುವಾಗಿದೆ. ಇಡೀ ದೇಶದ ಕಣ್ಣು ಇದ್ದದ್ದು, ಇದೇ ಬೆಂಗಳೂರಿನ(Bengaluru) ಮೇಲೆ. ಯಾಕಂದ್ರೆ, ಬೆಂಗಳೂರಿನ, ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ 2 ದಿನಗಳ ಕಾಲ ಮಹಾಘಟಬಂಧನದ ಸಭೆ ನಡೆದಿತ್ತು. ಅದು ಮುಕ್ತಾಯವಾಗೋ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಮಣಿಸೋಕೆ 26 ವಿಪಕ್ಷಗಳು ಒಟ್ಟಾಗಿ, ವಿಚಿತ್ರವ್ಯೂಹವೊಂದನ್ನ ಹೆಣೆದಿದ್ವು. ಅಷ್ಟೇ ಅಲ್ಲ, ಸತತ 2 ದಿನಗಳ ಕಾಲ ನಡೆದಿದ್ದ ಸಾಲು ಸಾಲು ಸಭೆಗಳಲ್ಲಿ,  ಸೀಟು ಹಂಚಿಕೆ ಚರ್ಚೆ ನಡೆದಿತ್ತು.. ಮೈತ್ರಿಯ ಬಗ್ಗೆ ಇದ್ದ ಗೊಂದಲಗಳನ್ನೆಲ್ಲಾ ಎಲ್ಲರೊಟ್ಟಿಗೆ ಚರ್ಚೆ ಮಾಡಿ ಬಗೆಹಿರಿಸಿಕೊಳ್ಳೋ ಪ್ರಯತ್ನವಾಗಿತ್ತು. ಅದೆಲ್ಲಾ ಆದ ಬಳಿಕ, ಮಹಾಘಟಬಂಧನ್ 2.0ಗೆ ಹೊಸ ನಾಮಕರಣ ಮಾಡಲಾಯ್ತು.

ಇದನ್ನೂ ವೀಕ್ಷಿಸಿ:  ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?