ಹೈಕಮಾಂಡ್ ತಲೆಯಲ್ಲಿನ ಲೆಕ್ಕಾಚಾರ ಏನು..? ವಿಜಯೇಂದ್ರಗೆ ಸಿಗುತ್ತಾ ಪ್ರಮುಖ ಸ್ಥಾನಮಾನ..?

Sep 8, 2023, 9:54 AM IST

ಆಯ್ಕೆ ಕಗ್ಗಂಟಿನ ನಡುವೆಯೇ ಬಿಜೆಪಿ(BJP) -ಜೆಡಿಎಸ್(JDS) ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಮೈತ್ರಿ ಆದರೆ ಶೇ.50ರಷ್ಟು ಮತ ಪಡೆಯಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಮೈತ್ರಿ ಪಕ್ಷಗಳ ನಡುವೆ ಹೊಂದಾಣಿಕೆಯೂ ಅತ್ಯಗತ್ಯವಾಗಿದೆ. ಬಿಜೆಪಿಯಲ್ಲಿ ಅಧ್ಯಕ್ಷ, ಪ್ರತಿಪಕ್ಷ ನಾಯಕನ ಆಯ್ಕೆ(opposition leader) ಕಗ್ಗಂಟ್ಟಾಗಿದ್ದು, ಸರ್ಕಾರ ರಚನೆಯಾಗಿ 100 ದಿನವಾದರೂ ನಾಯಕನ ಆಯ್ ನಡೆಯಲಿಲ್ಲ. ಹೈಕಮಾಂಡ್ ತಲೆಯಲ್ಲಿನ ಲೆಕ್ಕಾಚಾರ ಏನು..? ಎಂಬುದು ಇನ್ನೂ ಗೊತ್ತಾಗಿಲ್ಲ. ಮೈತ್ರಿ(Alliance) ದೃಷ್ಟಿಯಲ್ಲಿಟ್ಟುಕೊಂಡು  ರಾಜ್ಯಾಧ್ಯಕ್ಷರ ಆಯ್ಕೆ ಮುಂದೂಡಿಕೆ ಆಗ್ತಿದೆಯಾ ಎಂಬ ಅನುಮಾನ ಮೂಡಿದೆ. ಅಲ್ಲದೇ ಜಾತಿ, ಸಮುದಾಯವಾರು ಲೆಕ್ಕಾಚಾರಕ್ಕಾಗಿ ಸೈಲೆಂಟ್ ಆಯ್ತಾ ಹೈಕಮಾಂಡ್ ಎನ್ನಲಾಗ್ತಿದೆ. ಮೈತ್ರಿ ಫೈನಲ್ ಆದ ಬಳಿಕ ಆಯ್ಕೆ ಮಾಡೋಣ ಎನ್ನುವ ಲೆಕ್ಕಾಚಾರನಾ..? ಏನು ಎಂಬುದು ಇನ್ನೂ ತಿಳಿದಿಲ್ಲ. 

ಇದನ್ನೂ ವೀಕ್ಷಿಸಿ:  ಬಾದಾಮಿಯ ಮಹೇಶ್‌ ಎಸ್‌. ಹೊಸಗೌಡ್ರುಗೆ ಒಲಿದ ಸುವರ್ಣ ಸಾಧಕರು ಪ್ರಶಸ್ತಿ