ವಿರೋಧದ ಮಧ್ಯೆನೂ ಘರ್ ವಾಪ್ಸಿ ಮಾಡ್ತಿದ್ದಾರಾ ಡಿಕೆಶಿ ? ರಾಜೀನಾಮೆ ಮಾತುಗಳಾಡಿದ್ದೇಕೆ ತನ್ವೀರ್ ಸೇಠ್..?

ವಿರೋಧದ ಮಧ್ಯೆನೂ ಘರ್ ವಾಪ್ಸಿ ಮಾಡ್ತಿದ್ದಾರಾ ಡಿಕೆಶಿ ? ರಾಜೀನಾಮೆ ಮಾತುಗಳಾಡಿದ್ದೇಕೆ ತನ್ವೀರ್ ಸೇಠ್..?

Published : Aug 23, 2023, 03:52 PM IST

ಬಿಜೆಪಿಯಿಂದ ಯಾರೆಲ್ಲ ಹೊರ ನಡೆಯಲು ಸಿದ್ಧರಾಗಿದ್ದಾರೆ..? 
ಘರ್ ವಾಪ್ಸಿಗೆ ತನ್ವೀರ್ ಸೇಠ್.. ಭೀಮಣ್ಣ ನಾಯ್ಕ್ ವಿರೋಧ
ಘರ್ ವಾಪ್ಸಿಗೆ ಮಧು ಬಂಗಾರಪ್ಪನವರ ವಿರೋಧವೂ ಇದೆಯಾ..?

ರಾಜ್ಯ ರಾಜಕಾರಣದಲ್ಲಿ ಸಧ್ಯದ ಬಿಸಿ ಬಿಸಿ ಸುದ್ದಿ ಏನು ಅನ್ನೋದು ಎಲ್ರಿಗೋ ಗೊತ್ತಿದೆ. ಕಾಂಗ್ರೆಸ್ ಪಕ್ಷ ಆಪರೇಷನ್ ಹಸ್ತಕ್ಕೆ(operation hastha) ಕೈ ಹಾಕಿದೆ. ಮನೆ ಬಿಟ್ಟು ಹೋದವರನ್ನು ಮತ್ತೆ ತಾಂಬುಲ ಕೊಟ್ಟು ಮನೆ ತುಂಬಿಸಿಕೊಳ್ಳೋದ್ರಲ್ಲಿ, ರಾಜ್ಯ ಕಾಂಗ್ರೆಸ್(Congress) ಪಕ್ಷ ಮುಂದಾಗಿದೆ. ಘರ್ ವಾಪ್ಸಿ ಆಪರೇಷನ್‌ನಲ್ಲಿ ಕಾಂಗ್ರೆಸ್ ಆ್ಯಕ್ವಿವ್ ಆಗಿರೋದನ್ನು ಕಂಡು ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳಿಗೆ ನಡುಕ ಶುರುವಾಗಿದೆ. ಆದ್ರೆ, ಆಪರೇಷನ್ ಹಸ್ತಕ್ಕೆ ಕುದ್ದು ಕಾಂಗ್ರೆಸ್ ಪಕ್ಷದಲ್ಲೇ ವಿರೋಧ ಕೇಳಿ ಬರ್ತಿದೆ. ಸದ್ಯ ರಾಜ ರಾಜಕಾರಣದಲ್ಲಿ ಹೆಚ್ಚು ಕೇಳಿ ಬರ್ತಿರೋದು ಈ ಎರಡು ವಾಖ್ಯಗಳು. ಘರ್ ವಾಪ್ಸಿ ಮತ್ತು ಆಪರೇಷನ್ ಹಸ್ತ. ಅಂದು ಕಾಂಗ್ರೆಸ್ ಪಕ್ಷ ತೊರೆದಿದ್ದವರು, ವಾಪಸ್ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಕೆಲವರು ಕಾಂಗ್ರೆಸ್ ಸೇರುವುದು ಈಗಾಗ್ಲೇ ಖಚಿತವಾಗಿದೆ. ಇನ್ನು ಯಾರೆಲ್ಲ ಸೇರಲಿದ್ದಾರೆ ಅನ್ನೋದು ತಿಳಿಯಬೇಕಿದೆ. ಈಗಾಗ್ಲೇ ಯಶವಂತಪುರ ಕ್ಷೇತ್ರದ ಶಾಸಕ, ಎಸ್ ಟಿ ಸೋಮಶೇಖರ್, ಇನ್ನು ಕಾಂಗ್ರೆಸ್ ಸೇರುವ ಮುನ್ನವೇ ಅವರ ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ. ಹೀಗೆ ರಾಜ್ಯದಲ್ಲಿ ಆಪರೇಷನ್ ಹಸ್ತ ಕಾರ್ಯ ಜೋರಾಗಿನೇ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಆಪರೇಷನ್ ಹಸ್ತಕ್ಕೆ, ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್‌ನ ಈ ನಡೆ, ಬಿಜೆಪಿ ಪಕ್ಷಕ್ಕಂತೂ, ಅವರ ಬಾಣವೇ ಅವರಿಗೆ ತಿರುಗಿದಂತಾಗುತ್ತಿದೆ. ಇನ್ನು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಜೆಡಿಎಸ್ ಅಂತೂ ಕಂಗೆಟ್ಟು ಹೋಗಿದೆ. ಆದ್ರೆ, ಅಚ್ಚರಿ ಏನ್ ಗೊತ್ತಾ? ಈ ಘರ್ ವಾಪ್ಸಿಗೆ ಖುದ್ದು ಕಾಂಗ್ರೆಸ್ ಪಕ್ಷದಲ್ಲೇ ಅನೇಕ ನಾಯಕರಿಂದ ವಿರೋಧ ಕೇಳಿ ಬರ್ತಾಯಿದೆ. 

ಇದನ್ನೂ ವೀಕ್ಷಿಸಿ: ಚಂದ್ರನ ಅಂಗಳದಲ್ಲಿ ಆಟವಾಡಲು ವಿಕ್ರಮ ಸಿದ್ಧ: ಭಾರತ ಸಾಧಿಸಿದ್ದು ಹೇಗೆ ಯಾರೂ ಮಾಡದ ದಾಖಲೆ ?

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more