Mar 26, 2023, 2:31 PM IST
ನ್ಯೂಸ್ ಅವರ್ ಸ್ಪೆಶಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ-ರಾಜಕಾರಣಿ ಸುಮಲತಾ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯಕ್ಕೆ ಬಂದಿರುವುದು ಆಕಸ್ಮಿಕ . ಇಷ್ಟ ಪಟ್ಟು ಬಂದಿರುವ ಕ್ಷೇತ್ರವಲ್ಲ ಎಂದು ಹೇಳಿದರು. ಇನ್ನು ಅಂಬರೀಶ್ ಅಗಲಿಕೆಯ ನಂತರದ ಸಂದರ್ಭ ರಾಜಕೀಯಕ್ಕೆ ಸೇರುವಂತೆ ಮಾಡಿತು. ರಾಜಕೀಯ ಅನುಭವ ಎನ್ನುವುದು ನನಗೆ ಇರಲಿಲ್ಲ ಅಂಬರೀಶ್ ಜೊತೆ ಒಂದೆರಡು ಬಾರಿ ಪ್ರಚಾರಕ್ಕೆ ಹೋಗಿದ್ದೆ ಹೊರತು ಯಾವತ್ತು ರಾಜಕೀಯದ ಒಳಗೆ ಹೋಗಿರಲಿಲ್ಲ. 52 ವರ್ಷದ ನಂತರ ಇಂಡಿಪೆಂಡೆಂಟ್ ಆಗಿ ಗೆದ್ದದ್ದು ಹೆಮ್ಮೆ ಇದೆ . ಭಯ ಇದ್ದಿದ್ದರೆ ರಾಜಕೀಯ ಕ್ಷೇತ್ರ ಬರುತ್ತಿರಲಿಲ್ಲ .ಐತಿಹಾಸಿಕ ಗೆಲುವನ್ನು ಸಾಧಿಸಿ ಬಂದಿದ್ದರು ಕೊನೆಗೆ ಬರೋದು ನಾನು ಒಂದು ಹೆಣ್ಣು . ರಾಜಕೀಯದಲ್ಲಿ ಬರುವ ಮಾತುಗಳನ್ನು ಕೇಳಿ ಕೇಳಿ ಕೆಲವೊಮ್ಮೆ ರಾಜಕೀಯ ಬೇಕಿತ್ತಾ ಎಂದು ಅನಿಸಿತ್ತು ಎಂದು ಹೇಳಿದರು.