ಪ್ರತಿಪಕ್ಷ ನಾಯಕರ ರೇಸ್‌ನಲ್ಲಿದ್ದವರಿಗೆ ಬಿಗ್ ಶಾಕ್: ವೀಕ್ಷಕರ ವರದಿ ಬಳಿಕ ಆಯ್ಕೆ, ಯಾರಾಗ್ತಾರೆ ನಾಯಕ ?

ಪ್ರತಿಪಕ್ಷ ನಾಯಕರ ರೇಸ್‌ನಲ್ಲಿದ್ದವರಿಗೆ ಬಿಗ್ ಶಾಕ್: ವೀಕ್ಷಕರ ವರದಿ ಬಳಿಕ ಆಯ್ಕೆ, ಯಾರಾಗ್ತಾರೆ ನಾಯಕ ?

Published : Jul 03, 2023, 12:00 PM IST

ಕ್ಲೈಮ್ಯಾಕ್ಸ್ ಹಂತ ತಲುಪಿದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು..!
ವಿಪಕ್ಷ ನಾಯಕನ ಆಯ್ಕೆ ಜವಾಬ್ದಾರಿ ಹೊತ್ತ ರಾಜಾಹುಲಿ ಬಿಎಸ್ವೈ..!
ವಿಪಕ್ಷ ನಾಯಕರ ಮುಂದಿರುವ ಭಾರೀ ಸವಾಲುಗಳು ಏನೇನು..?

ಸದನದಲ್ಲಿ ಸಿದ್ದು ಪಡೆ ಎದುರಿಸಲು ಬಿಜೆಪಿಗೆ ಸಾರಥಿಯೇ ಸಿಕ್ಕಿಲ್ಲ. 50 ದಿನಗಳು ಕಳೆದ್ರೂ ವಿಪಕ್ಷ ನಾಯಕರ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಸಿದ್ದು ಸರ್ಕಾರವನ್ನು ಕಟ್ಟಿ ಹಾಕುವ ಪ್ರಭಲ ಸಾರಥಿಯನ್ನು ಆಯ್ಕೆ ಮಾಡೋದು ಬಿಜೆಪಿ ಹೈ ಕಮಾಂಡ್‌ಗೆ ದೊಡ್ಡ ಸವಾಲಾಗಿತ್ತು. ಅದ್ರಂತೆ ವಿಪಕ್ಷ ನಾಯಕರ ಹುಡುಕಾಟದಲ್ಲಿದ್ದ ಬಿಜೆಪಿ ಹೈಕಾಮಾಂಡ್ ತಲೆ ಕೆಡಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಹೈ ವೋಲ್ಟೆಜ್ ಮೀಟಿಂಗ್‌ನಲ್ಲಿ ರಾಜಾಹುಲಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ ಬಳಿಕ ವಿಪಕ್ಷ ನಾಯಕರ  ಆಯ್ಕೆ ಆಗಲಿದೆ ಎನ್ನಲಾಗ್ತಿತ್ತು. ಆದ್ರೆ ಇಂದು ರಾಜ್ಯಕ್ಕೆ ವೀಕ್ಷಕರು ಬರಲಿದ್ದು, ಅವರು ಬಂದ ಬಳಿಕ ವರದಿ ನೋಡಿ ಪ್ರತಿಪಕ್ಷ ನಾಯಕನ ಆಯ್ಕೆ ಆಗಲಿದೆ. ಮಾಜಿ ಸಿಎಂ ಬೊಮ್ಮಾಯಿ ಅವರೇ ವಿಧಾನಸಭೆಯ ವಿಪಕ್ಷ ನಾಯಕರಾಗ್ತಾರೋ? ಅಥವಾ ಅಚ್ಚರಿ ಪ್ರಯೋಗವನ್ನು ಹೈಕಮಾಂಡ್ ಕೈಗೊಳ್ಳಲಿದೆಯೋ ಎಂಬ ಕುತೂಹಲ ಇನ್ನೂ ಇದೆ. ವಿಪಕ್ಷ ಲೀಡರ್ ಸ್ಥಾನದಲ್ಲಿ ಕೂರಲು ಕೇಸರಿ ಪಡೆಯಲ್ಲಿ ರೇಸ್ ನಡೆಯುತ್ತಿದ್ದರೂ ಲೋಕಸಭೆ ಚುನಾವಣೆ ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು, ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನ ಹುಡುಕಾಟ ನಡೆಸಿ ವಿಪಕ್ಷ ನಾಯಕ ಯಾರಾಗ್ಬೇಕು ಅನ್ನೋ ನಿರ್ಧಾರವನ್ನ ಬಿಜೆಪಿ ಅಳೆದು ತೂಗಿ ಮಾಡಲಿದೆ.

ಇದನ್ನೂ ವೀಕ್ಷಿಸಿ:  ಶಿವರಾಮ್‌ ಹೆಬ್ಬಾರ್‌, ಸುನಿಲ್‌ ನಾಯ್ಕ್‌ಗೆ ಸಂಕಷ್ಟ: ಆರೋಪ ಸಾಬೀತಾದ್ರೆ 6 ವರ್ಷ ಚುನಾವಣಾ ಸ್ಪರ್ಧೆಗೆ ನಿರ್ಬಂಧ ?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more