ಒಂದೇ ವೇದಿಕೆಯಲ್ಲಿದ್ದರೂ ಮಾತನಾಡದ ಸಿಎಂ-ಡಿಸಿಎಂ..!
ಕ್ರಾಂತಿ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದೇಕೆ..?
ಮಿನಿಸ್ಟರ್ಸ್ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು ?
ಅಧಿಕಾರ ಇಲ್ಲದಿದ್ರೂ ಕುಸ್ತಿ, ಅಧಿಕಾರ ಬಂದ್ರೂ ಜಂಗೀಕುಸ್ತಿ. ಇದು ಕರ್ನಾಟಕ ಕಾಂಗ್ರೆಸ್(Congress) ಸ್ಪೆಷಾಲಿಟಿ. ತಾರಕಕ್ಕೇರಿದ್ದ ಅಂತರ್ಯುದ್ಧ, ಮಂತ್ರಿ ಮಂತ್ರಿಗಳ ಮಧ್ಯೆ, ಶಾಸಕ-ಶಾಸಕರ ಮಧ್ಯೆಯೇ ಜಟಾಪಟಿ. ಅವ್ರು ಕೌಂಟರ್ ಕೊಟ್ರು, ಇವ್ರು ಟಕ್ಕರ್ ಕೊಟ್ರು. ಅವ್ರು ಪಟ್ಟು ಹಾಕಿದ್ರು, ಇವ್ರು ದಾಳ ಉರುಳಿಸಿದ್ರು. ಪರಿಸ್ಥಿತಿ ಕೈ ಮೀರಿ ಹೋಗ್ತಿದ್ದಂತೆ ಅಖಾಡಕ್ಕಿಳಿದು ಕದನ ವಿರಾಮ ಘೋಷಿಸಿದ್ರಾ ಸಿಎಂ ಸಿದ್ದರಾಮಯ್ಯ(Siddaramaiah). ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್( Dk shivakumar) ಕಾಂಗ್ರೆಸ್"ನ ಜೋಡೆತ್ತುಗಳಾದ್ರೂ, ಈ ಜೋಡೆತ್ತುಗಳ ಮಧ್ಯೆ ಸ್ಪರ್ಧೆ ಇರೋ ವಿಷ್ಯ ನಿಮ್ಗೆ ಗೊತ್ತೇ ಇದೆ. ಚುನಾವಣೆಗೂ ಮೊದ್ಲು ಸಿಎಂ ಕುರ್ಚಿಗಾಗಿ ಸ್ಪರ್ಧೆ. ಚುನಾವಣೆ ಗೆದ್ದು ಸಿದ್ದರಾಮಯ್ಯ ಸಿಎಂ ಆದ್ಮೇಲೂ ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಮತ್ತೆ ಪೈಪೋಟಿ. ಸಿದ್ದರಾಮಯ್ಯ ಪರ ಒಂದಷ್ಟು ಶಾಸಕರು, ಮಂತ್ರಿಗಳು. ಡಿಕೆ ಶಿವಕುಮಾರ್ ಪರ ಮತ್ತೊಂದಷ್ಟು ಶಾಸಕರಿಂದ ವಕಾಲತ್ತು. ಇದು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ಆದ್ರೀಗ ಕ್ರಾಂತಿಯ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ನೇರವಾಗಿ ಪೈಪೋಟಿ ನಡೀತಾ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಇಬ್ಬರ ಬೆಂಬಲಿಗರು ಮಾತ್ರ ಕತ್ತಿ ಗುರಾಣಿ ಹಿಡಿದು ಯುದ್ಧಕ್ಕಿಳಿದಿರೋದಂತೂ ಸತ್ಯ. ಇದ್ರ ಮಧ್ಯೆ ಆ ಎರಡು ವೀಡಿಯೊಗಳು ಕೈ ಕೋಟೆಯೊಳಗೆ ಭರ್ಜರಿ ಸದ್ದು ಮಾಡ್ತಿವೆ. ಯಾಕಂದ್ರೆ 3 ವೀಡಿಯೋಗಳು ಒಂದೊಂದು ಕಥೆ ಹೇಳ್ತೀವಿ.
ಇದನ್ನೂ ವೀಕ್ಷಿಸಿ: ಪತ್ರಕರ್ತರ ಮೇಲೆ ದೌರ್ಜನ್ಯ ತಡೆಯಲು ಟ್ರೈನಿಂಗ್: ಸರ್ಕಾರಿ ಅಭಿಯೋಜಕರು, ಜರ್ನಲಿಸ್ಟ್‌ಗೆ ತರಬೇತಿ