Mar 1, 2022, 12:14 PM IST
ಬೆಳಗಾವಿ(ಮಾ.01): ನೀವು ಹೋರಾಟ ಮಾಡ್ತಿರೋದು ಸುಪ್ರೀಂಕೋರ್ಟ್ ವಿರುದ್ಧವೋ ಅಥವಾ ಮತ್ಯಾರ ವಿರುದ್ಧವೋ ಅಂತ ಸ್ಪಷ್ಟಪಡಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿತ್ತು, ಆಗ ಏನೂ ಮಾಡದೇ ಸುಳ್ಳನ್ನೇ ಬಂಡವಾಳ ಮಾಡಿ ಬಾಯಿಗೆ ಬಂದಂಗೆ ಮಾತನಾಡ್ತಾರೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
Mekedatu Padayatra: ಕಾಂಗ್ರೆಸ್ಸಿಗರ ವಿರುದ್ಧ ಶ್ರೀನಿವಾಸ ಪ್ರಸಾದ್ ವಾಗ್ದಾಳಿ
ಕಾಂಗ್ರೆಸ್‌ನಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆಶ್ಚರ್ಯಕರ ಸಂಗತಿ ಅಂದ್ರೆ ರಣದೀಪ್ ಸುರ್ಜೇವಾಲಾ ಬಂದು ಉದ್ಘಾಟನೆ ಮಾಡಿದ್ರು. ಈ ಪಾದಯಾತ್ರೆ ಯಾರ ವಿರುದ್ಧ ಅಂತಾ ಸುರ್ಜೇವಾಲಾರನ್ನ ಕೇಳ್ತೇನೆ. ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಯೋಜನೆ ವಿಷಯ ಪೆಂಡಿಂಗ್ ಇದೆ. ಈ ಸಂದರ್ಭದಲ್ಲಿ ನೀವು ಹೋರಾಟ ಮಾಡ್ತಿದ್ದು ಯಾಕೆ ಅಂತ ಸ್ಪಷ್ಟಪಡಿಸಬೇಕು. ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡ್ತಾರೆ. ಈ ಹಿಂದೆ ಸಿಂದಗಿ ಉಪಚುನಾವಣೆ ವೇಳೆ ಸೋಲೋದು ಖಚಿತ ಆದ್ಮೇಲೆ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ರು. ಹೊಟ್ಟೆ ಪಾಡಿಗಾಗಿ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ ಬಿಜೆಪಿ ಸೇರಿದ್ದಾರೆ ಅಂತ ಹೇಳಿಕೆ ನೀಡಿದ್ದರು. ಹಾಗಾದ್ರೆ ನೀವು ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಪಾರ್ಟಿ ಸೇರಿಕೊಂಡಿದ್ದೀರಾ?. ಸ್ವಲ್ಪ ವಿವೇಚನೆಯಿಂದ ಮಾತನಾಡಬೇಕು ಅಂತ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.