Jul 22, 2022, 7:15 PM IST
ಬೆಂಗಳೂರು, (ಜುಲೈ.22): ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ದೊಡ್ಡ ಸಮುದಾಯವಾಗಿದೆ. ಈ ಹಿನ್ನೆಲೆಯಲ್ಲಿ ವೋಟ್ ಬ್ಯಾಂಕ್ ಮಾಇಡಕೊಳ್ಳು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕನಿಗೆ ಮಹತ್ವದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮುಂಚೂಣಿ ಹುದ್ದೆಗಳನ್ನ ಲಿಂಗಾಯತ ಸಮುದಾಯದ ನಾಯಕರಿಗೆ ನೀಡಿದ ಉದಾಹರಣೆಗಳು ಸಾಕಷ್ಟಿವೆ.
ಸಿದ್ದು ಅಹಿಂದ ಅಸ್ತ್ರ, ಡಿಕೆಶಿ ಒಕ್ಕಲಿಗ ಕಾರ್ಡ್, ನಾಯಕತ್ವದಲ್ಲಿ ಹೈಕಮಾಂಡ್ ಫುಲ್ ಕನ್‌ಫ್ಯೂಸ್..!
ಅದರಂತೆ ಇದೀಗ ಕಾಂಗ್ರೆಸ್‌ನಿಂದ ಸಿಎಂ ರೇಸ್‌ಗೆ ಪ್ರಭಾವಿ ಲಿಂಗಾಯತ ನಾಯಕನ ಎಂಟ್ರಿಯಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮುಸುಕಿನ ಗುದ್ದಾಟ ನಡುವೆ ಪ್ರಬಲ ಸಮುದಾಯವಾದ ಲಿಂಗಾಯತ ಸಮುದಾಯದ ನಾಯಕ ರೇಸ್‌ನಲ್ಲಿದ್ದಾರೆ.