ಲೋಕಸಭೆ ಚುನಾವಣೆ: ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು, ಸದಾನಂದ ಗೌಡ ಗರಂ!

ಲೋಕಸಭೆ ಚುನಾವಣೆ: ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು, ಸದಾನಂದ ಗೌಡ ಗರಂ!

Published : Jun 07, 2023, 10:51 AM IST

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು ಎನ್ನಲಾಗುತ್ತಿದೆ.  ಆದರೆ ಈ ವರದಿ ಬಗ್ಗೆ ಡಿವಿ ಸದಾನಂದ ಗೌಡ ಗರಂ ಆಗಿದ್ದಾರೆ. ಹಾಲಿ ಸಂಸದರ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. 

ಬೆಂಗಳೂರು (ಜೂ.07): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ 10 ಬಿಜೆಪಿ ಸಂಸದರಿಗೆ ಟಿಕೆಟ್‌ ಡೌಟು ಎನ್ನಲಾಗುತ್ತಿದೆ.  ಆದರೆ ಈ ವರದಿ ಬಗ್ಗೆ ಡಿವಿ ಸದಾನಂದ ಗೌಡ ಗರಂ ಆಗಿದ್ದಾರೆ. ಹಾಲಿ ಸಂಸದರ ತೇಜೋವಧೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಗೌರವದಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುವವರನ್ನು ಅವನು ಜನಪ್ರತಿನಿಧಿಯಾಗಿರುವುದಕ್ಕೆ ನಾಲಾಯಕ್ಕು, ಆತ ಆಯೋಗ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಬಹಳ ಬೇಸರದ ಸಂಗತಿ ಎಂದರು. ಯಾಕಾಗಿ ಈ ರೀತಿ ಮಾಡುತ್ತಾರೆ ಅಂತ ಗೊತ್ತಿಲ್ಲ. ಬಿಜೆಪಿಯನ್ನು ರಾಜ್ಯದಲ್ಲಿ ಪೂರ್ತಿ ಮುಗಿಸಬೇಕೆನ್ನುವ ಹುನ್ನಾರವೋ ಗೊತ್ತಿಲ್ಲ. ಹಿಂದೆ ಯಾರಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. 

ರಾಜ್ಯದ 13 ಜನ ಹಾಲಿ ಸಂಸದರಿಗೆ ಟಿಕೆಟ್‌ ಇಲ್ಲ, ಕೆಲವರು ಮುದುಕರಾಗಿದ್ದಾರೆ, ಕೆಲವರು ಅನಾರೋಗ್ಯಪೀಡಿತರು ಇತ್ಯಾದಿ ಹಣೆಪಟ್ಟಿಯನ್ನು ಕಟ್ಟಿಅವರ ತೇಜೋವಧೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಅಂತ ನಾನು ಭಾವಿಸುತ್ತೇನೆ. ಈ ಎಂಪಿಗಳು ಮನೆಯಿಂದ ಹೊರಡದಂತಾಗುತ್ತಿದೆ. ಇದೇ ಪ್ರಶ್ನೆಗಳು ಹಾಗೂ ಹಿಂದಿನಿಂದ ನೂರಾರು ಮಾತುಗಳು ಮುಂದಿನ ಒಂದು ವರ್ಷದ ಕಾಲ ಕರ್ತವ್ಯ ನಿರ್ವಹಣೆ ಮಾಡಲಾರದಷ್ಟು ಅಸಹಾಯಕತೆಗೆ ತಳ್ಳುತ್ತವೆ ಎಂದು ಹೇಳಿದರು. ಈ ಎಲ್ಲ ಸಂಸದರು ಗೌರವಾನ್ವಿತರು, ಸಜ್ಜನರು. ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದವರು. ಹಲವಾರು ಬಾರಿ ಗೆದ್ದವರು. ಘಟಾನುಘಟಿಗಳನ್ನು ಸೋಲಿಸಿದವರು. ಮುಂದೆಯೂ ರಾಜಕಾರಣದ ಎಲ್ಲಾ ಸವಾಲುಗಳನ್ನು ಎದುರಿಸಬಲ್ಲವರು. ಈ ಮಹನೀಯರ ತೇಜೋವಧೆ ಮಾಡುವಂತಹ ಪ್ರವೃತ್ತಿ ಸರ್ವಥಾ ಸಾಧುವಲ್ಲ ಎಂದರು.

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?