Oct 11, 2022, 5:38 PM IST
ಬೆಂಗಳೂರು (ಅ.11): 2024ರಲ್ಲಿ ನಡೆಯಲಿರೋ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಭಾರತ್ ಜೋಡೋ ಯಾತ್ರೆ ಮೂಲಕ ಸಿದ್ಧತೆಯನ್ನ ಶುರು ಮಾಡಿದೆ. ಉಳಿದ ಪಕ್ಷಗಳು ಕೂಡ ಚುನಾವಣಾ ತಯಾರಿಯನ್ನ ಶುರು ಮಾಡಿಕೊಂಡಿದೆ. ಮತ್ತೊಮ್ಮೆ ಗೆದ್ದು ಹ್ಯಾಟ್ರಿಕ್ ಕನಸಲ್ಲಿ ಇರೋ ಬಿಜೆಪಿ ಕೂಡ ಈಗ ಒಂದು ಮೆಗಾ ಸ್ಟ್ರಾಟಜಿ ಜೊತೆಗೆ ಕಣಕ್ಕೆ ಇಳಿಯಲಿದೆ.
ಬಿಜೆಪಿಯ ಜೋಡೆತ್ತುಗಳು ಖ್ಯಾತಿಯ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಭಾರತ ಪರ್ಯಟನೆ ಮಾಡೋ ಲೆಕ್ಕಾಚಾರದಲ್ಲಿ ಇದಾರೆ. ಯಾವೆಲ್ಲಾ ಕ್ಷೇತ್ರಗಳು ಈ ಜೋಡಿಯ ಟಾರ್ಗೆಟ್ ಆಗಿದೆ. ಮೋದಿ-ಶಾ ಜೋಡಿ ಕಮಾಲ್ ಮಾಡುತ್ತಾ?ಅವರ ಮುಂದಿನ ಸಂಕಲ್ಪವೇನು ಅನ್ನೋದು ಎಲ್ಲರ ಕುತೂಹಲಕ್ಕೆ ಕರಣವಾಗಿದೆ,
ಬಿಜೆಪಿ ಸೋತ 144 ಕ್ಷೇತ್ರ ಗೆಲ್ಲಲು ಮೋದಿ, ಶಾ ಪಣ: ಜೋಡೆತ್ತಿನಿಂದ ಈಗಿಂದಲೇ ರ‍್ಯಾಲಿ..!
ಒಂದೂವರೆ ವರ್ಷದ ಬಳಿಕ ನಡೆಯಬೇಕಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಿನಿಂದಲೇ ಭರದ ತಯಾರಿ ಆರಂಭಿಸಿದೆ. 144 ಸೋತ ಕ್ಷೇತ್ರಗಳನ್ನ ಟಾರ್ಗೆಟ್ ಇಟ್ಕೊಂಡು ಅದನ್ನ ಗೆಲ್ಲೋಕೆ ಮುಂದಾಗಿದೆ.