ಮೋದಿ ಘೋಷಿಸಿದ 400.. ಟಾರ್ಗೆಟ್ ಅಲ್ಲ, ಸ್ಟ್ರಾಟರ್ಜಿ ? ಲೋಕ ರಣಾಂಗಣದಲ್ಲಿ ಸಿದ್ಧವಾಗಿದೆ ವಿಚಿತ್ರ ಲೆಕ್ಕಾಚಾರ!

May 22, 2024, 1:09 PM IST

ಸುಮಾರು ಹತ್ತು ದಿನ ಬಾಕಿ.. ಆ ಹತ್ತು ದಿನಗಳಲ್ಲಿ ಮತಯುದ್ಧ ಮುಗಿದಿರುತ್ತೆ. ನಾವೂ ನೀವೂ ಮಾಡಿರೋ ಮತಗಳೆಲ್ಲಾ ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿರ್ತಾವೆ.. ಜೂನ್ 4ರಂದು ಮತದಾರ ಮಹಾಪ್ರಭುವಿನ ಒಲವು  ಯಾರ ಕಡೆಗಿದೆ, ಯಾರು ಗೆಲ್ತಾರೆ? ಯಾರಿಗೆ ದೆಹಲಿ ಗದ್ದುಗೆ ದಕ್ಕಲಿದೆ ಅನ್ನೋದು ಗೊತ್ತಾಗಿಬಿಡುತ್ತೆ.. ಆದ್ರೆ, ಅಲ್ಲೀ ತನಕ ಕಾಯೋದ್ರಲ್ಲಿ ಕುತೂಹಲವಿದೆ.. ಆ ಭವಿಷ್ಯದ ಫಲಿತಾಂಶಕ್ಕೆ, ಈಗಿನ ವಾಸ್ತವ ಹೇಗೆ ಬುನಾದಿ ಹಾಕಲಿದೆ ಅನ್ನೋ ಚರ್ಚೆ ನಡೀತಿದೆ.. ಅದರ ಮಧ್ಯೆ, ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಒಂದು ಅಚ್ಚರಿಯ ಸಂಗತಿ ಬಯಲು ಮಾಡಿದ್ದಾರೆ.. ಅದೆಲ್ಲದರ ಅಸಲಿ ಕತೆ  ಹೇಳೋದೇ ಇವತ್ತಿನ ಸುವರ್ಣ ಫೋಕಸ್, 400.. ಟಾರ್ಗೆಟ್ ಅಲ್ಲ, ಸ್ಟ್ರಾಟರ್ಜಿ