Nov 21, 2021, 8:37 PM IST
ಕೋಲಾರ (ನ. 21) ಪರಿಷತ್ ಚುನಾವಣೆಯಲ್ಲಿ(Legislative Council) ಬಿಜೆಪಿ ಬೆಂಬಲ ಕೇಳಿದೆ ಎನ್ನುವ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy)ಕೋಲಾರದಲ್ಲಿ (Kolar) ಪ್ರತಿಕ್ರಿಯೆ ನೀಡಿದ್ದಾರೆ.ನಗೆ ಈ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಆ ರೀತಿ ಬಂದ್ರೆ ಮುಂದೆ ಯೋಚನೆ ಮಾಡುವೆ. ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ನಾಳೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿಲ್ಲ. ಬಿಜೆಪಿಯ (BJP) ಬಿ ಟೀಂ ಎಂದು ನಮ್ಮ ಬಗ್ಗೆ ಲಘುವಾಗಿ ಮಾತನಾಡುತ್ತಿದ್ರು. ಕಾಂಗ್ರೆಸ್ ನಿಂದ (Congress) ಪಕ್ಷಾಂತರ ಆದವರನ್ನು ಈಗ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಈಗ ಬಿಜೆಪಿಯ ಎ ಟೀಮ ಅಥವಾ ಸಿ ಟೀಮಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಪಟ್ಟಿಯಲ್ಲಿ ಪ್ರಮುಖರಿಗೆ ಸ್ಥಾನ ಇಲ್ಲ
ರಾಜ್ಯದಲ್ಲಿ ಅನಿರೀಕ್ಷಿತ ಬೆಳೆ ಹಾನಿ,ಮನೆಗಳು ಬಿದ್ದು ಹೋಗಿವೆ. ಜನರು ನೋವಿನಲ್ಲಿ ಇದ್ದಾರೆ, ಸರ್ಕಾರಗಳು ಚುನಾವಣೆಗೆ ಅಧ್ಯತೆ ನೀಡಬಾರದು. ಪರಿಹಾರ ನೀಡಬೇಕೆಂದು ವಿರೋಧ ಪಕ್ಷಗಳಾಗಿ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕೃಷಿ ಕಾಯ್ದೆ ವಾಪಸ್ಸು ಪಡೆದಿರುವುದು ರೈತರ ಗೆಲವು ಇದು ಕಾಂಗ್ರೆಸ್ ನ ಗೆಲುವು ಅಲ್ಲ ಮೃತಪಟ್ಟಿರುವ ರೈತರಿಗೆ ಪರಿಹಾರ ನೀಡುವ ಕೆಲಸ ಆಗಬೇಕಿದೆ ಎಂದು ಆಗ್ರಹಿಸಿದರು.