ದೆಹಲಿಯಲ್ಲಿನ ನಿರ್ಣಯ ಶಾಸಕರ ಸಭೆಯಲ್ಲಿ ಘೋಷಣೆ ಮಾಡ್ತಾರಾ ?: ಯಾರ ಪಾಲಾಗುತ್ತೆ ಕೇಸರಿ ಲೀಡರ್‌ ಕಿರೀಟ..?

Jul 4, 2023, 10:52 AM IST

ಬೆಂಗಳೂರು: ವಿಧಾನಸಭೆ ಅಧಿವೇಶನ ಎರಡನೇ ದಿನವೂ ಬಿಜೆಪಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಇಂದು ಸಂಜೆ ಬಿಜೆಪಿ ಹೈವೋಲ್ಟೇಜ್‌ ಶಾಸಕಾಂಗ ಸಭೆ ನಡೆಯುವ ಸಾಧ್ಯತೆ ಇದೆ. ರಾಜ್ಯಕ್ಕೆ ಮನ್ಸೂಕ್‌ ಮಾಂಡವಿಯಾ ಮತ್ತು ವಿನೋದ್‌ ತಾವಡೆ ಬರಲಿದ್ದಾರೆ. ಪ್ರತಿಪಕ್ಷ ನಾಯಕನ ಸ್ಪರ್ಧೆಯಲ್ಲಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಇದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರು ಸೂಚಿಸಿದ ನಾಯಕನ ಹೆಸರನ್ನೇ ಬಿಜೆಪಿ ಹೈಕಮಾಂಡ್‌ ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಒಂದು ವೇಳೆ ಬೊಮ್ಮಾಯಿ ಆಯ್ಕೆ ಆದ್ರೆ, ಸಂಘಟನೆ ಮಟ್ಟದಲ್ಲಿ ವಿರೋಧ ವ್ಯಕ್ತವಾಗಲಿದೆ. ಯತ್ನಾಳ್‌ ಆಯ್ಕೆ ಆದ್ರೆ, ಬಿಎಸ್‌ವೈ ಮತ್ತು ಹಿರಿಯ ನಾಯಕರ ವಿರೋಧ ವ್ಯಕ್ತವಾಗಲಿದೆ.  

ಇದನ್ನೂ ವೀಕ್ಷಿಸಿ:  ಅಧಿವೇಶನದಲ್ಲಿ ವಿಪಕ್ಷಗಳ ದಿಕ್ಕು ತಪ್ಪಿಸಲು ಹೊರಟಿತಾ ಕಾಂಗ್ರೆಸ್‌?: ಸದನದಲ್ಲಿ ಕಾಯ್ದೆ ಕದನಕ್ಕೆ ತಾತ್ಕಾಲಿಕ ಬ್ರೇಕ್‌..!