ದೇವೇಗೌಡ,  HDK ಮಣ್ಣಿನ ಮಕ್ಕಳಾದರೆ...ನಾವು ಯಾರ ಮಕ್ಕಳು!

Dec 10, 2020, 6:10 PM IST

ಬೆಂಗಳೂರು (ಡಿ.  10)  ಭೂ ಸುಧಾರಣೆ ಕಾಯಿದೆಯನ್ನು ಕುಮಾರಸ್ವಾಮಿ ಹೇಗೆ ಒಪ್ಪಿಕೊಂಡರು? ಯಾವಾಗಲು ಮಣ್ಣಿನ ಮಗ ಎಂದು ಕರೆದುಕೊಳ್ಳುವ ಇವರಿಗೆ ನಾಚಿಕೆಯಾಗಬೇಕು.. ಹೀಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

'ಪ್ರಮಾಣ ವಚನಕ್ಕೆ ಹಾಕಿಕೊಳ್ಳುವ ಹಸಿರು ಶಾಲು ನಂತ್ರ ಎಲ್ಲೋಯ್ತು?'

ಅವರ ಕುಟುಂಬ ನಾವು ರೈತರ ಪರ ಎಂದು ಹೇಳುತ್ತದೆ.. ಆದರೆ ಇವರು ಮಾಡುತ್ತಿರುವ ರೀತಿ ನೋಡಿದರೆ ನಾಚಿಕೆ ಆಗಲ್ವಾ.. ಕುಮಾರಸ್ವಾಮಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.