Rajya Sabha Election: ನಡೆಯಲಿದ್ಯಾ ಅಡ್ಡ ಮತದಾನ..? ಏನಿದು ಮತ ಸಮೀಕರಣ..?

Feb 16, 2024, 3:16 PM IST

ಕಮಲದಳ ನಾಯಕರು ಆಡ್ತಿರೋ ಗೂಢಾರ್ಥದ ಮಾತುಗಳನ್ನು ಕೇಳಿಸ್ಕೊಂಡ್ರಾ. ಇದು ರಾಜ್ಯಸಭಾ(Rajyasabha) ರಣರಂಗದಲ್ಲಿ ಶುರುವಾಗಿರೋ “ಪಂಚ”ಮಂತ್ರ, “ಪಂಚರ್” ತಂತ್ರದ ರೋಚಕ ಸ್ಟೋರಿ. ಫೆಬ್ರವರಿ 27ರಂದು ನಡೆಯಲಿರೋ ರಾಜ್ಯಸಭಾ ಚುನಾವಣೆ, ರಾಜ್ಯದಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಕಾರಣ, ಬಿಜೆಪಿ(BJP)-ಜೆಡಿಎಸ್(JDS) ದೋಸ್ತಿ ಪಾಳೆಯದಿಂದ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಸದ್ಯದ ಸಂಖ್ಯಾಬಲದ ಪ್ರಕಾರ ಕರ್ನಾಟಕದಿಂದ(Karnataka) ರಾಜ್ಯಸಭೆಗೆ ಆಯ್ಕೆಯಾಗಿ ಹೋಗಲಿರುವ ಸದಸ್ಯ ಸಂಖ್ಯೆ ನಾಲ್ಕು. ಇದ್ರಲ್ಲಿ ಕಾಂಗ್ರೆಸ್"ಗೆ 3, ಬಿಜೆಪಿಗೆ ಒಂದು ಸ್ಥಾನ ಅನ್ನೋದು ಮೇಲ್ನೋಟಕ್ಕೆ ಕಾಣ್ತಿರೋ ಲೆಕ್ಕಾಚಾರ. ಕಾಂಗ್ರೆಸ್'ನಿಂದ ನಾಸಿರ್ ಹುಸೇನ್, ಜಿ.ಸಿ ಚಂದ್ರಶೇಖರ್ ಮತ್ತು ಹೈಕಮಾಂಡ್ ಅಭ್ಯರ್ಥಿ ಅಜಯ್ ಮಾಕೆನ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಇಡೀ ರಾಜ್ಯಸಭೆ ಅಖಾಡವನ್ನು ರಣರಂಗವಾಗಿಸಿರೋದು ದೋಸ್ತಿ ಪಾಳೆಯದಿಂದ ಸಿಡಿದಿರೋ ಪಂಚಂತ್ರ. ಯೆಸ್.. ಗೆಲ್ಲುವ ನಂಬರ್ ಇಲ್ಲದೇ ಇದ್ದರೂ, ಬಿಜೆಪಿ-ಜೆಡಿಎಸ್'ನ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ವೀಕ್ಷಿಸಿ:  ಸಿಎಂ ಸುದೀರ್ಘ ಬಜೆಟ್‌ ಮಂಡನೆ: ಲೋಕಸಭಾ ಚುನಾವಣಾ ಮತಬೇಟೆಗೆ ಪೂರಕವಾಗಿ ಅನುದಾನ