ಸಕ್ಕರೆ ನಾಡಿನಿಂದ ಸ್ಪರ್ಧೆಗೆ ಎಚ್‌ಡಿಕೆಗೆ ಬಿಜೆಪಿ ಓಪನ್ ಆಫರ್..! ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರಾ ದಳಪತಿ..?

ಸಕ್ಕರೆ ನಾಡಿನಿಂದ ಸ್ಪರ್ಧೆಗೆ ಎಚ್‌ಡಿಕೆಗೆ ಬಿಜೆಪಿ ಓಪನ್ ಆಫರ್..! ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರಾ ದಳಪತಿ..?

Published : Dec 30, 2023, 09:07 AM IST

ಮಂಡ್ಯ ರಣರಂಗ ಗೆಲ್ಲಲು "ದಳಪತಿ ದಾಳ"ಉರುಳಿಸಿದ ಕೇಸರಿ ಪಡೆ..!
ಕುಮಾರಸ್ವಾಮಿ ಭೇಟಿಯಾದ ಮಂಡ್ಯ ಜಿಲ್ಲಾ ಬಿಜೆಪಿ ನಾಯಕರು..!
ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಎಚ್‌ಡಿಕೆಗೆ ಆಹ್ವಾನ..!

ಮಂಡ್ಯ, ರಣರಣ ಮಂಡ್ಯ. ರಾಜಕಾರಣ ಅಂತ ಬಂದ್ರೆ ಇಡೀ ಇಂಡಿಯಾದ ಗಮನ ಸೆಳೆಯೋ ಮಂಡ್ಯ(Mandya). ಇದು ನಾಲ್ಕೂವರೆ ವರ್ಷಗಳ ಹಿಂದೆ.. ಅಂದ್ರೆ 2019ರ ಲೋಕಸಭಾ ಚುನಾವಣೆಯ(Loksabha election) ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು(HD Kumaraswamy) ಆಡಿದ್ದ ಮಾತು. ಮಂಡ್ಯ ಬಗ್ಗೆ ಗೊತ್ತು, ಮಂಡ್ಯ ಜನರ ಬಗ್ಗೆ ಗೊತ್ತು. ಮಂಡ್ಯ ಜಿಲ್ಲೆ ನಮ್ಮ ಹೃದಯ ಅಂದಿದ್ರು ಕುಮಾರಣ್ಣ. ಆದ್ರೆ ಅದೇ ಮಂಡ್ಯದಲ್ಲಿ ಜೆಡಿಎಸ್‌ಗೆ(JDS) ಹೃದಯಾಘಾತವಾಗಿದ್ದು, ಕುಮಾರಸ್ವಾಮಿಯವರ ಮಗ ಲೋಕಸಭಾ ಚುನಾವಣೆಯಲ್ಲಿ ಸೋತದ್ದು. ಎಲ್ಲಾ ಈಗ ಇತಿಹಾಸ. 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಮಂಡ್ಯದಿಂದ ಸ್ಪರ್ಧಿಸಿ ಸೋತ ನಂತ್ರ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ರಾಜಕೀಯ ಚಿತ್ರಣಗಳು, ಸಮೀಕರಣಗಳು, ಮೈತ್ರಿವ್ಯೂಹಗಳು ಬದಲಾಗಿವೆ. ಅವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮಾಡ್ಕೊಂಡು ಲೋಕಸಭಾ ಅಖಾಡಕ್ಕಿಳಿದಿದ್ರೆ, ಈ ಬಾರಿ ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಮಾಡ್ಕೊಂಡಿದೆ. ದಳಪತಿಗಳೊಂದಿಗೆ ದೋಸ್ತಿ ಕುದುರಿದ್ದೇ ತಡ. ಮಂಡ್ಯದ ಬಿಜೆಪಿ ನಾಯಕರು ರಣರೋಚಕ ದಾಳವೊಂದನ್ನು ಉರುಳಿಸಿದ್ದಾರೆ. ಅದೇ ಮಂಡ್ಯ ಗೆಲ್ಲಲು ಕೇಸರಿ ಕಲಿಗಳು ಉರುಳಿಸಿರೋ ದಳಪತಿ ದಾಳ.

ಮಂಡ್ಯ ಅಂದ್ರೆ ರಾಜಕೀಯ ರಣರಂಗ. ರಾಜಕಾರಣ ಅಂತ ಬಂದ್ರೆ ಮಂಡ್ಯ ಇಡೀ ಇಂಡಿಯಾದ ಗಮನವನ್ನು ಸೆಳೆದು ಬಿಡೋ ಅಖಾಡ. ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರುವಾಸಿಯಾಗಿರೋ ಮಂಡ್ಯದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸದ್ದಿಲ್ಲದೆ ತಯಾರಿ ನಡೀತಾ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರೇ ಸ್ಪರ್ಧಿಸ್ಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಅಂದ ಹಾಗೆ, ದಳಪತಿ ಮುಂದೆ ಈ ಆಫರ್ ಇಟ್ಟಿರೋದು ಜೆಡಿಎಸ್'ನವರಲ್ಲ, ಮೈತ್ರಿ ಪಕ್ಷ ಬಿಜೆಪಿ ನಾಯಕರು. ಯೆಸ್.. ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್ ನೇತೃತ್ವದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಂಡ್ಯದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಈ ಭೇಟಿ ವೇಳೆ ಮಂಡ್ಯ ಬಿಜೆಪಿ ನಾಯಕರು ದಳಪತಿ ಮುಂದೆ ಮಾತನಾಡಿದ್ದೇನು ಅನ್ನೋದನ್ನು ಡೀಟೇಲ್ಲಾಗಿ ತೋರಿಸ್ತೀವಿ ನೋಡಿ.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಇಂದು ಶನಿದೇವರ, ನಾಗನ ಆರಾಧನೆ ಮಾಡಿ..

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
Read more