ಬಿಜೆಪಿಯ ಮಾಜಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..
ಉಡುಪಿ ಕಾಲೇಜುವೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರ ವಿಡಿಯೋವನ್ನು ಮುಸ್ಲಿಂ ಹುಡುಗಿಯರು ಶೂಟ್ ಮಾಡಿದ ಪ್ರಕರಣ ನಡೆದಿತ್ತು. ಈ ಪ್ರಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬಿಜೆಪಿ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Pujari) ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಲಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಹಾಗೂ ಸರ್ಕಾರ ನಿರ್ಲಕ್ಷ್ಯ ಮಾಡಿದ್ದರಿಂದ ಇದು ಇಷ್ಟು ದೊಡ್ಡದಾಗಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ದೇಶದ ಪ್ರತಿಯೊಬ್ಬರನ್ನು ಈ ಮಣ್ಣಿನ ಪುತ್ರರಂತೆ ನೋಡುತ್ತಾರೆ. ಅಲ್ಪಸಂಖ್ಯಾತರನ್ನು ನಮ್ಮ ಪಕ್ಷ ಕಡೆಗಣಿಸುತ್ತಿಲ್ಲ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಇದನ್ನೂ ವೀಕ್ಷಿಸಿ: Today Rashibhavishy: ಇಂದು ತುಲಾ ರಾಶಿಯವರು ಹೆಚ್ಚು ವ್ಯಯ ಮಾಡಲಿದ್ದು, ವೃತ್ತಿಯಲ್ಲಿ ಮಿಶ್ರಫಲ