ಮೂರು ದಿನ. ನೂರು ತಂತ್ರ.. ಟಾರ್ಗೆಟ್ ಗೌಡರ ಕೋಟೆ!
ಕರ್ನಾಟಕ ಕುರುಕ್ಷೇತ್ರಕ್ಕೆ ಕೇಸರಿ ಚಾಣಕ್ಯನ ಎಂಟ್ರಿ!
ಒಕ್ಕಲಿಗ ಕೋಟೆಯಲ್ಲಿ ಬಿಜೆಪಿ ರೋಚಕ ರಣತಂತ್ರ..!
ವರ್ಷಾಂತ್ಯಕ್ಕೆ ಅಮಿತ್ ಶಾ... ಹೊಸ ವರ್ಷಕ್ಕೆ ಮೋದಿ..!
ಮಂಡ್ಯ (ಡಿ.29): ಕರ್ನಾಟಕ ಕುರುಕ್ಷೇತ್ರಕ್ಕೆ ಕೇಸರಿ ಚಾಣಕ್ಯನ ಎಂಟ್ರಿ..! ಮೂರು ದಿನ.. ನೂರು ತಂತ್ರ.. ಟಾರ್ಗೆಟ್ ಗೌಡರ ಕೋಟೆ..! ಬಿಜೆಪಿ ಹಣೆಬರಹವನ್ನೇ ಬದಲಿಸ್ತಾರಾ ಅಮಿತ್ ಶಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಚಾಣಕ್ಯನ ಕರ್ನಾಟಕ ಚದುರಂಗ.
ಅವರನ್ನು ಕೇಸರಿ ಚಾಣಕ್ಯ ಅಂತ ಕರೀತಾರೆ. ಚುನಾವಣೆಗಳನ್ನು ಗೆಲ್ಲೋ ಮಾಸ್ಟರ್ ಮೈಂಡ್ ಅಂತಾರೆ. ಅವ್ರಿಗೆ ಎಲೆಕ್ಷನ್ ತಂತ್ರಗಾರಿಕೆಗಳನ್ನ ಹೆಣೆಯೋದ್ರಲ್ಲಿ ಪಂಟರ್ ಅನ್ನೋ ಹೆಸರಿದೆ. ಅಂಥಾ ಚಾಣಕ್ಯ, ಅಂಥಾ ಮಾಸ್ಟರ್'ಮೈಂಡೆಡ್ ಲೀಡರ್, ಪ್ರಧಾನಿ ಮೋದಿಯವರ ರೈಟ್ ಹ್ಯಾಂಡ್ ಅಮಿತ್ ಶಾ, ಗುರುವಾರ ರಾಜ್ಯಕ್ಕೆ ಬರ್ತಿದ್ದಾರೆ. ಬಂದವ್ರೇ ನುಗ್ಗಲಿರೋ ಗೌಡರ ಕೋಟೆಗೆ. ಕುರುಕ್ಷೇತ್ರಕ್ಕೆ ರಣಕಹಳೆ ಮೊಳಗಿಸಲು ಬರ್ತಿರೋ ಕೇಸರಿ ಚಾಣಕ್ಯನ ಕರ್ನಾಟಕ ಚದುರಂಗದ ರೋಚಕ ರಹಸ್ಯವನ್ನು ತೋರಿಸ್ತೀವಿ ನೋಡಿ.
ಹಳೇ ಮೈಸೂರು ಚಕ್ರವ್ಯೂಹ ಭೇದಿಸಲು ಹೊರಟಿರೋ ಕೇಸರಿ ಪಡೆ ತನ್ನ ಚಾಣಕ್ಯನನ್ನೇ ಅಖಾಡಕ್ಕಿಳಿಸ್ತಾ ಇದೆ. ಅಮಿತ್ ಶಾ ರಾಜ್ಯ ಭೇಟಿಯ ಹೊತ್ತಲ್ಲೇ ರಾಮನಗರದಲ್ಲಿ ರಾಮಮಂದಿರ ವಿಚಾರ ಸದ್ದು ಮಾಡ್ತಾ ಇದೆ. ಹಾಗಾದ್ರೆ ಹಳೇ ಮೈಸೂರು ಗೆಲ್ಲಲು ಬಿಜೆಪಿ ರಾಮನ ಅಸ್ತ್ರ ಪ್ರಯೋಗಿಸಲಿದ್ಯಾ..? ಅಷ್ಟಕ್ಕೂ ಏನಿದು ರಾಮಮಂದಿರ ರಹಸ್ಯ..? ಹಳೇ ಮೈಸೂರು ಚಕ್ರವ್ಯೂಹಕ್ಕೆ ಶುಕ್ರವಾರ ಕೇಸರಿ ಚಾಣಕ್ಯ ಅಮಿತ್ ಶಾ ನುಗ್ಗಲಿದ್ದಾರೆ. ಬಿಜೆಪಿಗೆ ಕಬ್ಬಿಣದ ಕಡಲೆಯಾಗಿರೋ ಚದುರಂಗದಲ್ಲಿ ಚಾಣಕ್ಯ ಶಾ, ದಾಳ ಉರುಳಿಸಲಿದ್ದಾರೆ.
ಮಂಡ್ಯ: ಬಿಜೆಪಿ ಸೇರ್ಪಡೆ ಬಗ್ಗೆ ಸೂಚನೆ ನೀಡಿದ್ರಾ ಸಂಸದೆ ಸುಮಲತಾ?
ಇದೇ ಹೊತ್ತಲ್ಲಿ ಕೇಸರಿ ಕೋಟೆಯಿಂದ ನುಗ್ಗಿ ಬಂದಿದೆ ರಾಮಮಂದಿರ ಅಸ್ತ್ರ.. ಹಾಗಾದ್ರೆ ಹಳೇ ಮೈಸೂರು ಗೆಲ್ಲಲು ಬಿಜೆಪಿ ರಾಮನ ಅಸ್ತ್ರ ಪ್ರಯೋಗಿಸಲಿದ್ಯಾ..? ಅಷ್ಟಕ್ಕೂ ಏನಿದು ರಾಮಮಂದಿರ ರಹಸ್ಯ..? ಶುಕ್ರವಾರ ಮಂಡ್ಯದಲ್ಲಿ ಅಮಿತ್ ಶಾ ಹವಾ ಎಬ್ಬಿಸಲಿದ್ದಾರೆ. ಆ ಮೂಲಕ ಗೌಡರ ಕೋಟೆ ಭೇದಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಹೆಣೆದಿದೆ. ಅಮಿತ್ ಶಾ ಅವರ ಮಂಡ್ಯ ಭೇಟಿ ದಳಪತಿಗಳ ಭದ್ರಕೋಟೆಯನ್ನು ಛಿದ್ರ ಮಾಡುತ್ತಾ..? ಹಳೇ ಮೈಸೂರು ಕೋಟೆಯಲ್ಲಿ ರಾಜಕೀಯ ಸಂಚಲನ ಎಬ್ಬಿಸಲು ಕೇಸರಿ ಚಾಣಕ್ಯನೇ ಮಂಡ್ಯಕ್ಕೆ ಬರ್ತಿದ್ದಾರೆ. ಮೂಲಕ ಗೌಡರ ಕೋಟೆ ಭೇದಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಹೆಣೆದಿದೆ. ಹಾಗಾದ್ರೆ ಅಮಿತ್ ಶಾ ಅವರ ಮಂಡ್ಯ ಭೇಟಿ ದಳಪತಿಗಳ ಭದ್ರಕೋಟೆಯನ್ನು ಛಿದ್ರ ಮಾಡುತ್ತಾ..? ಕೇಸರಿ ಚಾಣಕ್ಯನ ಕರ್ನಾಟಕ ಚದುರಂಗದ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ರಾಜಧಾನಿ ಬೆಂಗಳೂರನ್ನು ಹೊರತು ಪಡಿಸಿದ್ರೆ ಹಳೇ ಮೈಸೂರು ಭಾಗದಲ್ಲಿ ಒಟ್ಟು 9 ಜಿಲ್ಲೆಗಳು ಬರುತ್ತವೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ. ಇವು ಹಳೇ ಮೈಸೂರು ಪ್ರಾಂತ್ಯದಲ್ಲಿ ಬರೋ ಒಟ್ಟು 9 ಜಿಲ್ಲೆಗಳು. ಇಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ವಿವಿಧ ಪಕ್ಷಗಳ ಶಾಸಕರ ಬಲಾಬಲದ ಮಾಹಿತಿ ಇಲ್ಲಿದೆ ನೋಡಿ..
ಅಮಿತ್ ಶಾ ಮಂಡ್ಯ ಸಮಾವೇಶಕ್ಕೆ 1 ಲಕ್ಷ ಜನ: ಎಸ್‌ಟಿಎಸ್
* ಹಳೇ ಮೈಸೂರು ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಒಟ್ಟು 57 ವಿಧಾನಸಭಾ ಕ್ಷೇತ್ರಗಳಿವೆ.
* ಈ 57 ವಿಧಾನಸಭಾ ಕ್ಷೇತ್ರಗಳಲ್ಲಿರುವ ಬಿಜೆಪಿ ಶಾಸಕರ ಒಟ್ಟು ಸಂಖ್ಯೆ ಕೇವಲ 12.
* ಚಾಮರಾಜನಗರದ 4 ಕ್ಷೇತ್ರಗಳ ಪೈಕಿ ಒಬ್ಬರು ಬಿಜೆಪಿ ಶಾಸಕರಿದ್ದಾರೆ.
* ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕಡೆ ಬಿಜೆಪಿ ಶಾಸಕರಿದ್ದಾರೆ.
* ಮಂಡ್ಯದ 7 ಕ್ಷೇತ್ರಗಳಲ್ಲಿ ಒಬ್ಬ ಬಿಜೆಪಿ ಶಾಸಕ ಇದ್ದಾರೆ.
* ಹಾಸನದ 7 ಕ್ಷೇತ್ರಗಳಲ್ಲಿ ಒಬ್ಬ ಬಿಜೆಪಿ ಶಾಸಕರಿದ್ದಾರೆ.
* ರಾಮನಗರ ಜಿಲ್ಲೆಯ 4 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿಲ್ಲ.
* ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರೋ 4 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರ ಸಂಖ್ಯೆ ಶೂನ್ಯ.
* ತುಮಕೂರಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ.
* ಚಿಕ್ಕಬಳ್ಳಾಪುರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಒಬ್ಬರು ಬಿಜೆಪಿ ಶಾಸಕರಿದ್ದಾರೆ.
* ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬನೇ ಒಬ್ಬ ಬಿಜೆಪಿ ಶಾಸಕನಿಲ್ಲ.