Dec 19, 2022, 5:09 PM IST
ಬೆಳಗಾವಿಯ ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ವಿಚಾರ ರಾಜಕೀಯ ತಿರುವು ಪಡೆದಿದ್ದು,ನಾವು ಹೇಳಿದವರ ಫೋಟೋ ಹಾಕಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಸವಣ್ಣ, ವಾಲ್ಮಿಕಿ, ಬಸವಣ್ಣ ನಾರಾಯಣಗುರು, ಕನಕದಾಸರು, ಶಿಶುನಾಳ ಶರೀಫರು ಹಾಗೂ ಕುವೆಂಪು ಹೀಗೆ ಅನೇಕರು ದಾರ್ಶನಿಕರು ಇದ್ದಾರೆ. ಅವರ ಫೋಟೋಗಳನ್ನು ಇಡಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಸೈದ್ಧಾಂತಿಕವಾಗಿ ಸಾವರ್ಕರ್'ನ್ನು ವಿರೋಧಿಸಿದ್ದ ಕಾಂಗ್ರೆಸ್, ಇದೀಗ ರಾಜಕೀಯವಾಗಿ ಏಟು ಬೀಳಬಹುದು ಅನ್ನೋ ಲೆಕ್ಕಾಚಾರದಿಂದ ನಾವು ಪ್ರತಿಭಟನೆ ಮಾಡಿಲ್ಲ ಎಂದು ಹೇಳಿದೆ.