Dhruva Narayan: ಭಾರೀ ರೋಚಕವಾಗಿದ್ದ ಧ್ರುವನಾರಾಯಣ ರಾಜಕೀಯ ಜರ್ನಿ..!

Mar 12, 2023, 5:42 PM IST

ಬೆಂಗಳೂರು (ಮಾ.12): ಒಂದು ದಿನದ ಮುಂಚೆ ಬಿಡುವಿಲ್ಲದ ಪ್ರಚಾರ ಮಾಡಿ ಪಕ್ಷಕ್ಕಾಗಿ ಬೆವರಿಳಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್‌ ಬೆಳಗ್ಗೆ ಏಳುತ್ತಲೇ ವಿಧಿವಶ ಆಗಿದ್ದಾರೆ. ಒಂದು ವೋಟಿನ ಗೆಲುವಿನ ದಾಖಲೆ ಬರೆದಿದ್ದ ಹಸನ್ಮುಖಿ ನಾಯಕ ಕಣ್ಮರೆ ಆಗಿದ್ದು, ಅವರ ರಾಜಕೀಯ ಜರ್ನಿ ಭಾರೀ ರೋಚಕವಾಗಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕಾರ್ಯಾಧ್ಯಕ್ಷ ಧ್ರುವಾನಾರಯಣ ಅವರ ಕಾರ್ಯವೈಖರಿಗೆ ಮೆಚ್ಚಿದ್ದರು. ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಧ್ರುವ ನಾರಾಯಣ ಅವರ ಕಾರ್ಯವೈಖರಿಯನ್ನು ನೆನೆದು ಡಿ.ಕೆ ಶಿವಕುಮಾರ್‌ ಗಳಗಳನೆ ಕಣ್ಣೀರು ಸುರಿಸಿ ಅತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ‘ಧ್ರುವ’ತಾರೆ ಧ್ರುವನಾರಾಯಣ್‌ ಮರೆಯಾಗಿದ್ದಾರೆ ಎಂಬ ಕಂಬನಿ ಎಲ್ಲ ಪಕ್ಷಗಳ ನಾಯಕರಿಂದಲೂ ಕೇಳಿಬಂದಿದೆ.

ಧ್ರುವನಾರಾಯಣ ಅಂತ್ಯಕ್ರಿಯೆ ಮುನ್ನ ಪುತ್ರನಿಗೆ ಕೈ ಟಿಕೆಟ್‌ ಘೋಷಿಸಿ: ಕಾಂಗ್ರೆಸ್‌ಗೆ ಪೀಕಲಾಟ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಧ್ರವ ನಾರಾಯಣ್‌ ಇನ್ನು ನೆನಪು ಮಾತ್ರ. ಹಠಾತ್ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ರಾಜಕಾರಣದಲ್ಲಿ ಅತ್ಯಂತ ಸಜ್ಜನ ಹಾಗೂ ಸರಳ ರಾಜಕಾರಣಿ ಅಂತಲೇ ಗುರುತಿಸಿಕೊಂಡಿದ್ದ ಧ್ರುವನಾರಾಯಣ್ ಅಕಾಲಿಕ ನಿಧನ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ತಂದಿದೆ. ಮರೆಯಾದ ಧೃವ ತಾರೆಯನ್ನು ನೆನೆದು ಎಲ್ಲಾ ಪಕ್ಷದ ನಾಯರು ಕಂಬನಿ ಮಿಡಿದಿದ್ದಾರೆ. ಹಾಗಾದ್ರೆ ಬನ್ನಿ ಅಗಲಿದ ಧೃವ ತಾರೆಯ ರಾಜಕೀಯ ಹಾದಿ ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ. ಧೃವ ನಾರಾಯಣ್ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಕೇವಲ ಒಂದೇ ಒಂದು ಮತದಿಂದ ರೋಚಕವಾಗಿ ಗೆದ್ದು, ದೇಶದಾದ್ಯಂತ  ಸುದ್ದಿಯಾಗಿದ್ದರು.