Jan 13, 2022, 5:39 PM IST
ಬೆಂಗಳೂರು (ಜ. 13): ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ (Congress) ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಯ (Mekedatu Padayatre) ಮೇಲೆ ಹೈಕೋರ್ಟ್ (High Court)ಕೆಂಗಣ್ಣು ಬೀರಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೂ ಛೀಮಾರಿ ಹಾಕಿತ್ತು. ಇವೆಲ್ಲದರ ಪರಿಣಾಮವಾಗಿ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ರಾಮನಗರದಲ್ಲಿಯೇ ಮೊಟಕುಗೊಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D K Shivkumar) ಹೇಳಿದ್ದಾರೆ. ಕೋವಿಡ್-19 2ನೇ ಅಲೆಯ ವೇಳೆ ಆಕ್ಸಿಜನ್ ಅಭಾವದ ಕುರಿತಾಗಿ ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕೆ ಮಾಡಿದ್ದ ಕಾಂಗ್ರೆಸ್, ಮೂರನೇ ಅಲೆಯ ವೇಳೆ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಮುರಿದು ಪಾದಯಾತ್ರೆ ನಡೆಸಿದ್ದರ ಹಿಂದಿರುವ ರಾಜಕೀಯವೇನು ಎನ್ನುವುದರ ಲೆಕ್ಕಾಚಾರ ಆರಂಭವಾಗಿದೆ.
News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!
ಮೇಕೆದಾಟು ಪಾದಯಾತ್ರೆಯ ಮೂಲಕ ಅಧಿಕಾರದ ಕನಸಿಗೆ ಬಲ ನೀಡುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಈಗ ಹಿನ್ನಡೆಯಾಗಿರುವುದು ನಿಜ. ಪಾದಯಾತ್ರೆಯನ್ನು ಸರ್ಕಾರವೇ ತಡೆದಲ್ಲಿ ಜನರ ಅನುಕಂಪ ಸಿಗಲಿದೆ ಎನ್ನುವ ತಂತ್ರ ಕಾಂಗ್ರೆಸ್ ಪಕ್ಷದ್ದಾಗಿತ್ತು. ಇನ್ನು ಪಾದಯಾತ್ರೆಯನ್ನು ತಡೆದರೆ ಸರ್ಕಾರದ ಮೇಲೆ ಬರಬಹುದಾದಂಥ ಅಪವಾದವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೂಡ ಇದನ್ನು ತಡೆಯುವ ಗೋಜಿಗೆ ಹೋಗಿರಲಿಲ್ಲ. ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವ ಯೋಚನೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಈಗ ಹೈಕೋರ್ಟ್ ನಿರ್ಧಾರಕ್ಕೆ ಬದ್ಧವಾಗಿ ಪಾದಯಾತ್ರೆ ತಡೆಯುವ ತೀರ್ಮಾವನ್ನು ಕೈಗೊಂಡಿತ್ತು.