Nov 8, 2022, 11:05 PM IST
ಬೆಂಗಳೂರು (ನ.8): ಹಿಂದುಗಳ ಆಕ್ರೋಶಕ್ಕೆ ತುತ್ತಾಗಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯೋದಿಲ್ಲ, ಕ್ಷಮೆ ಕೇಳೋದಿಲ್ಲ ಎಂದು ಹೇಳಿದ್ದಾರೆ. ಅದರ ಬದಲು ಮಂಗಳವಾರ ತಾವು ಹೇಳಿದ ಹೇಳಿಕೆಗೆ ಸಮರ್ಥನೆಗೆ ಮುಂದಾಗಿದ್ದಾರೆ.
ಹೇಳಿದ್ದು ತಪ್ಪು ಅಂತಾ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ನೀಡುತ್ತೇನೆ ನಾನು ನೀಡಿದ ಹೇಳಿಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ.ನನ್ನ ಹೇಳಿಕೆಯಲ್ಲಿ ವಿವಾದ ಆಗುವಂತಹ ಪ್ರಶ್ನೆಯೇ ಇಲ್ಲ. ಇದು ನನ್ನ ಹೇಳಿಕೆಯಲ್ಲ ಡಿಕ್ಷನರಿಯಲ್ಲಿ ಇದೆ, ನಿಮಗೆ ಕೊಡ್ತೀನಿ. ಪುಸ್ತಕಗಳಲ್ಲೂ ಹಿಂದೂ ಪದದ ಬಗ್ಗೆ ಅರ್ಥದ ಉಲ್ಲೇಖವಿದೆ ಎಂದು ಹೇಳಿದ್ದಾರೆ.
ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ!
ಈ ನಡುವೆ ಸತೀಶ್ ಜಾರಕಿಹೊಳಿ ಅವರ ಗುರು ಸಿದ್ಧರಾಮಯ್ಯ, ಈ ಕುರಿತಾಗಿ ರಾಜ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರ ಹೇಳಿರುವ ಪ್ರತಿಕ್ರಿಯೆಯೇ ನನ್ನ ಪ್ರತಿಕ್ರಿಯೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಡಿಕೆ ಶಿವಕುಮಾರ್, ಬಿಕೆ ಹರಿಪ್ರಸಾದ್ ಇದು ಅವರ ವೈಯಕ್ತಿಕ ಹೇಳಿಕೆ, ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಸತೀಶ್ ಜಾರಕಿಹೊಳಿ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಹೊರಹಾಕಿದ್ದಾರೆ.