ಆಪರೇಷನ್‌ ಹಸ್ತಕ್ಕೆ ರಣಬೇಟೆಗಾರ ಡಿ.ಕೆ. ಶಿವಕುಮಾರ್‌ ರಣತಂತ್ರ: ದಸರಾದಲ್ಲೇ ಮುಹೂರ್ತ ಫಿಕ್ಸ್‌

Sep 16, 2023, 1:19 PM IST

ಬೆಂಗಳೂರು (ಸೆ.16): ರಾಜ್ಯದ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರಾರೂಢ ಕಾಂಗ್ರೆಸ್‌ ಆಪರೇಷನ್‌ ಹಸ್ತಕ್ಕೆ ಕೈ ಹಾಕಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವರು ಕಾಂಗ್ರೆಸ್‌ ಸೇರಿದ್ದಾರೆ. ಈಗ ದಸರಾಗೆ ಮತ್ತೊಂದು ಆಪರೇಷನ್ ಪಕ್ಕಾ ಆಗಿದೆ. ಇದು ಆಪರೇಷನ್ ಬೇಟೆಗಾರ ಡಿಕೆ ಶಿವಕುಮಾರ್ ಅವ್ರೇ ಫಿಕ್ಸ್ ಮಾಡಿರೋ ಮುಹೂರ್ತವಾಗಿದೆ. ಆಪರೇಷನ್ ಹಸ್ತಕ್ಕೆ ಡಿಕೆಶಿ ರೋಚಕ ಸೂತ್ರವೊಂದನ್ನು ರೆಡಿ ಮಾಡಿದ್ದಾರೆ. ಡಬಲ್ ಧಮಾಕದ ಮೇಲೆ ಗುರಿ ಇಟ್ಟು ರೆಡಿಯಾಗಿರೋ ಆ ಸೂತ್ರದ ಗುಟ್ಟನ್ನು ತೋರಿಸ್ತೀವಿ ನೋಡಿ..

ನಾನು ಸೈಲೆಂಟಾಗಿರೋನಲ್ಲ, ಫುಟ್ಬಾಲ್ ಆಡಲ್ಲ, ಚೆಸ್ ಗೇಮ್ ಆಡ್ತೀನಿ ಅಂತಿದ್ದ ಡಿಕೆ ಶಿವಕುಮಾರ್ ನಿಜಕ್ಕೂ ಚೆಸ್ ಆಟ ಶುರು ಮಾಡಿದ್ದಾರೆ. ಒಂದು ಸುತ್ತಿನ ಆಪರೇಷನ್ ಮುಗಿಸಿ ಮತ್ತೊಂದು ಆಪರೇಷನ್'ಗೆ ದಸರಾ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆಪರೇಷನ್ ಹಸ್ತಕ್ಕೆ ರೋಚಕ ಸೂತ್ರವೊಂದನ್ನೂ ರೆಡಿ ಮಾಡಿದ್ದಾರೆ. ಡಬಲ್ ಧಮಾಕದ ಮೇಲೆ ಗುರಿ ಇಟ್ಟು ರೆಡಿಯಾಗಿದ್ದಾರೆ.

ಕಾಂಗ್ರೆಸ್‌ ಮೂವರನ್ನು ಡಿಸಿಎಂ ಮಾಡಿದ್ರೆ, ಎಲ್ಲ ಸಮುದಾಯಗಳ ಬೆಂಬಲ ಸಿಗುತ್ತದೆ: ಸಚಿವ ಕೆ.ಎನ್. ರಾಜಣ್ಣ

ಆಪರೇಷನ್ ಸಾಮ್ರಾಟ್ ಕಾರ್ಯಾಚರಣೆಯಲ್ಲಿ ಡಿಕೆ ಶಿವಕುಮಾರ್ ಖೆಡ್ಡಾಗೆ ಕಾಂಗ್ರೆಸ್ ಸೇರಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆಪರೇಷನ್'ನಿಂದ ಬಿಜೆಪಿ ಕೋಟೆ ಅಲುಗಾಡಲಿದೆ ಎಂದು ಕೇಳಿಬರುತ್ತಿದೆ. ಬಿಜೆಪಿಯ ಸಾಮ್ರಾಟ್‌ ಆರ್.ಅಶೋಕ್ ಅವರ ಬಲಗೈಯಂತಿದ್ದವರನ್ನೇ ಡಿಕೆಶಿ ಕಾಂಗ್ರೆಸ್'ಗೆ ಸೆಳೆದಿದ್ದಾರೆ. ಈ ಆಪರೇಷನ್'ನಿಂದ ಸಾಮ್ರಾಟ್ ಕಟ್ಟಿದ ಕೋಟೆ ಅಲುಗಾಡಲಿದೆಯೇ ? ಅವರ ಶಕ್ತಿ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆಪರೇಷನ್ ದಸರಾ ಸಸ್ಪೆನ್ಸ್'ಗೆ ಅಕ್ಟೋಬರ್ 20 ಅಥವಾ 21ಕ್ಕೆ ಉತ್ತರ ಸಿಗಲಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವ್ರೇ ಹೇಳಿದ್ದಾರೆ.