* ಸಂಪುಟ ಸರ್ಜರಿಗೆ ಚಾಲನೆ ನೀಡ್ತಾರಾ ಸಿಎಂ ಬೊಮ್ಮಾಯಿ
* ಎರಡು ಬಾರಿ ಮಂತ್ರಿಯಾದವರಿಗೆ ಕೊಕ್
* ಹೊಸ ಮುಖಗಳಿಗೆ ಅವಕಾಶ ನೀಡಲು ಸಂಘ ಪರಿವಾರ ಸೂಚನೆ
ಬೆಂಗಳೂರು(ಮಾ.11): ಪಂಚ ರಾಜ್ಯಗಳ ಬಿಜೆಪಿಗೆ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ಸಂಪುಟ ಸರ್ಜರಿ ಬಗ್ಗೆ ಟಾಕ್ ಶುರುವಾಗಿದೆ. ಗುಜರಾತ್ ಹಾಗೂ ಉತ್ತರಾಖಂಡ್ ರಾಜ್ಯಗಳ ಪ್ರಯೋಗವನ್ನ ಕರ್ನಾಟಕದಲ್ಲೂ ಪ್ರಯೋಗ ಮಾಡೋ ಬಗ್ಗೆ ಇದೀಗ ಚರ್ಚೆಯಾಗುತ್ತಿದೆ. ಮತ ತಂದುಕೊಡುವ ಮುಖಗಳಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸಂಪುಟದಲ್ಲಿರುವ ಹಿರಿಯ ಸಚಿವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎರಡು ಬಾರಿ ಮಂತ್ರಿಯಾದವರಿಗೆ ಕೊಕ್ ಕೊಡುವ ಸಾಧ್ಯತೆ ಇದೆ. ಜಾತಿ, ಪ್ರಾದೇಶಿಕ ವರ್ಚಸ್ಸು ಇರುವ ಮುಖಗಳಿಗೆ ಮಣೆ ಹಾಕಲಾಗುತ್ತಿದೆ. ಹೊಸ ಮುಖಗಳಿಗೆ ಅವಕಾಶ ನೀಡಲು ಸಂಘ ಪರಿವಾರ ಸೂಚನೆ ಕೊಟ್ಟಿದೆ. ಹೀಗಾಗಿ ಈ ತಿಂಗಳಂತ್ಯಕ್ಕೆ ಸಂಪುಟ ಸರ್ಜರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಜನರಿಗೆ ಮೋದಿ ಬಗ್ಗೆ ವಿಶ್ವಾಸ, ಅಭಿವೃದ್ಧಿ ಕಾರ್ಯ, ಉತ್ತರಾಖಂಡ್‌ನಲ್ಲಿ ಗೆದ್ದೆವು: ಪ್ರಹ್ಲಾದ್ ಜೋಶಿ