ಸಚಿವ ಸಂಪುಟ ವಿಸ್ತರಣೆ/ ಆರ್. ಶಂಕರ್ ಹೇಳುವ ಮಾತೇನು?/ ಉಪಚುನಾವಣೆಯಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನದ ಮಣೆ/ ಚುನಾವಣೆಗೆ ಟಿಕೆಟ್ ಸಿಗದೇ ಸ್ಥಾನ ವಂಚಿತರಾದ ಆರ್. ಶಂಕರ್.
ಬೆಂಗಳೂರು(ಫೆ. 06) ಇನ್ನು ನಾಲ್ಕು ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತೊಮ್ಮೆ ಆಗಲಿದ್ದು ನನಗೆ ಸ್ಥಾನ ಸಿಗಲಿದೆ ಎಂದು ಆರ್. ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಭವನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಂಕರ್ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದರು.
ಹಲವು ದಿನಗಳಿಂದ ಪ್ರಶ್ನೆಯಾಗಿ ಉಳಿದುಕೊಂಡಿದ್ದ ಸಚಿವ ಸಚಿವ ಸಂಪುಟ ವಿಸ್ತರಣೆ ಕೊನೆಗೂ ಆಗಿದೆ. ಆದರೆ ರಾಜೀನಾಮೆ ಕೊಟ್ಟು ಮಂತ್ರಿ ಸ್ಥಾನ, ಶಾಸಕ ಸ್ಥಾನ ತೊರೆದು ಹೊರಬಂದಿದ್ದ ಆರ್. ಶಂಕರ್ ಗೆ ಬಿಜೆಪಿ ಚುನಾವಣೆಯಲ್ಲಿ ರಾಣೇಬೆನ್ನೂರು ಟಿಕೆಟ್ ನೀಡಿರಲಿಲ್ಲ ಆದರೆ ಮಂತ್ರಿ ಮಾಡುವ ಭರವಸೆ ನೀಡಿತ್ತು.