* ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* ಕುಮಾರಸ್ವಾಮಿ ವಿರುದ್ಧ ಗುಡುಗಿದ ಜಮೀರ್
* ಜೆಡಿಎಸ್ ಎರಡು ಕಡೆ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಬಿಜೆಪಿಗೆ ಲಾಭವಾಗಲು
* ಕುಮಾರಸ್ವಾಮಿಯವರೇ ನನ್ನನ್ನು ಕೆಣಕುವ ಕೆಲಸ ಮಾಡಬೇಡಿ
ವಿಜಯಪುರ (ಅ. 23) ಮಾಜಿ ಸಿಎಂ ಕುಮಾಸ್ವಾಮಿ (HD Kumaraswamy) ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಹರಿಹಾಯ್ದಿದ್ದಾರೆ.
ಗೋಣಿ ಚೀಲದಲ್ಲಿ ಹಣ ತಂದು ಹಂಚುವುದು ಯಾರ ಸಂಪ್ರದಾಯ?
ನನ್ನ ಮಹಾನ್ ನಾಯಕ ದೇವೇಗೌಡರನ್ನು ಗೆಲ್ಲಿಸಲು ಕುಮಾರಸ್ವಾಮಿ ಬಳಿ ಆಗಲಿಲ್ಲ. ಜೆಡಿಎಸ್(JDS) ನವರು ಅಲ್ಪಸಂಖ್ಯಾತರನ್ನು ಬಲಿಹಾಕುತ್ತಿದೆ. ಆರ್ ಎಸ್ ಎಸ್(RSS)ನಿಂದಲೇ ಕುಮಾರಸ್ವಾಮಿಗೆ ಸೂಚನೆ ಬಂದಿರಬಹದು ಎಂದು ಜಮೀರ್ ಆರೋಪಿಸಿದರು. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ.