*ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣಾ ಕಣ
* ಸಿದ್ದರಾಮಯ್ಯ ಒಬ್ಬ ಬುರುಡೆ ರಾಮಯ್ಯ ಎಂದ ಬಿಜೆಪಿ
* ನೀವು ಘೋಷಣೆ ಮಾಡಿದ ಮನೆಗಳು ಎಲ್ಲಿವೆ?
* ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಕ್ಕೆ ಚುನಾವಣೆ
ಬೆಂಗಳೂರು(ಅ. 23) ಉಪಚುನಾವಣಾ (Karnataka By Poll) ಕಣದಲ್ಲಿ ವಾಕ್ ಸಮರದ್ದೇ ಕಾರು ಬಾರು. ಸಿದ್ದರಾಮಯ್ಯ (Siddaramaiah) ಒಬ್ಬ ಬುರುಡೆ ರಾಮಯ್ಯ ಎಂದು ಬಿಜೆಪಿ (BJP) ಟಾಂಗ್ ಕೊಟ್ಟಿದೆ. ನೀವು ಘೋಷಣೆ ಮಾಡಿದ ಹದಿನೇಳು ಲಕ್ಷ ಮನೆ ಎಲ್ಲಿದೆ? ಅಂಗೈನಲ್ಲಿ ಆಕಾಶ ತೋರಿಸುವುದರಲ್ಲಿ ನೀವು ಪ್ರವೀಣರಲ್ಲವೆ? ಎಂದು ಕೇಳಿದೆ.
ಹಳೆ ದೋಸ್ತಿಗಳ ನಡುವೆ ಶುರುವಾಯ್ತು ಸಾಲ ಮನ್ನಾ ಸಮರ
ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣ ಆಗುತ್ತದೆಯಾ? ಎಂದು ಪ್ರಶ್ನಿಸಿದೆ. ಸಿಂಧಗಿ (Sindhagi) ಮತ್ತು ಹಾನಗಲ್ (Hangal) ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ.