Jan 16, 2023, 11:30 AM IST
ಇಂದಿನಿಂದ ಎರಡು ದಿನ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ತೆರಳಲಿದ್ದು, ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ತೆರಳಲಿರುವ ಸಿಎಂ, ಹುಬ್ಬಳ್ಳಿಯ ಯುವ ಜನೋತ್ಸವ ಸಮಾರೋಪದ ಬಳಿಕ ದೆಹಲಿಗೆ ಹೋಗಲಿದ್ದಾರೆ. ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಜನವರಿ 19ರ ನಂತರ ಸಂಪುಟ ವಿಸ್ತರಣೆ ಸಾಧ್ಯತೆ ಇದೆ. ಜನವರಿ 19ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಮೋದಿ ಭೇಟಿ ಬಳಿಕವೇ ಸಂಪುಟ ವಿಸ್ತರಣೆ ಆಗಲಿದೆ ಎನ್ನಲಾಗುತ್ತಿದೆ.
'ಕುಮಾರವ್ಯಾಸಭಾರತ ಕಥಾಮೃತ' ಕೃತಿ: ಇದು ಶ್ರೀ ಭಾರತೀ ಪ್ರಕಾಶನದ ಕೊಡುಗೆ ...