
ಒಂದು ಕಾಲದ ಆಪ್ತ ಮಿತ್ರರಾಗಿದ್ದ ಗಣಿ ಧಣಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ದ್ವೇಷದ ಕಿಡಿ ಹೊತ್ತಿಕೊಂಡಿದೆ. ಈ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವೇನು? ಸೇಡಿನ ಯುದ್ಧಕ್ಕೆ ಕಾರಣವೇನು?
ಸ್ನೇಹಕ್ಕೆ ಜೀವ ಕೊಡ್ತೀವಿ ಅಂದಿದ್ರು ಆ ಜೀವದ ಗೆಳೆಯರು.. ದೋಸ್ತಿಗಳ ಮಧ್ಯೆ ಭುಗಿಲೆದ್ದು ನಿಂತಿತು ರಣದ್ವೇಷ, ದುಷ್ಮನಿ. ಶ್ರೀರಾಮುಲು ಚರಿತ್ರೆಯನ್ನೇ ಬಿಚ್ಚಿಟ್ಟ ಗಣಿಧಣಿ ಜನಾರ್ಧನ ರೆಡ್ಡಿ. ಅದೊಂದು ಮರ್ಡರ್ ಕೇಸ್, ರೆಡ್ಡಿ ಹೇಳಿದ ಚಾಕು ಕೊಡಲಿ ಕಥೆಗೆ ರಾಮುಲು ರೆಬೆಲ್. ಹಳೇ ಕಥೆ, ರೋಚಕ ಚರಿತ್ರೆ. ಎಲ್ಲವನ್ನೂ ಬಿಚ್ಚಿಡ್ತೇನೆ ಹುಷಾರ್ ಅಂತ ಅಬ್ಬರಿಸಿದ ಬಳ್ಳಾರಿಯ ಜನಾರ್ಧನ ರೆಡ್ಡಿ. ಹಾಗಾದರೆ ಎರಡು ದೇಹ ಒಂದೇ ಆತ್ಮದಂತಿದ್ದವರು ದೂರವಾಗಿದ್ಯಾಕೆ.? ಸ್ನೇಹಕ್ಕೆ ಅನ್ವರ್ಥ ಅಂತಿದ್ದವರು ವೈರಿಗಳಾಗಿದ್ದು ಯಾಕೆ..? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಅಷ್ಟಕ್ಕೂ ಗಟ್ಟಿಯಾಗಿದ್ದ ಸ್ನೇಹದಲ್ಲಿ ಬಿರುಕು ಬಿಟ್ಟದ್ದು ಯಾಕೆ..? ದೋಸ್ತಿಗಳು ದುಷ್ಮನ್'ಗಳಾಗಲು ಕಾರಣವಾದ ಆ ಘಟನೆ ಯಾವುದು..? ಅದೊಂದು ಕಾರಣಕ್ಕೆ ಗೆಳೆಯರ ಮಧ್ಯೆ ದ್ವೇಷದ ಜ್ವಾಲೆ ಹೊತ್ತಿಕೊಳ್ತಾ..? ಎರಡು ದೇಹ ಒಂದೇ ಆತ್ಮದಂತಿದ್ದವರ ಮಧ್ಯೆ ಸೇಡಿನ ಯುದ್ಧ ಆರಂಭವಾಗಿದ್ದು ಯಾಕೆ ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.
ಎರಡು ದೇಹ ಒಂದೇ ಆತ್ಮದಂತಿದ್ದವರ ಮಧ್ಯೆ ಸೇಡಿನ ಯುದ್ಧ ಆರಂಭವಾಗಿದೆ. ಆಪ್ತಮಿತ್ರರಾಗಿದ್ದವರು ಕದನಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಮುನಿಸಿಕೊಂಡಿರೋ ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ..? ಮಾಜಿ ಆಪ್ತಮಿತ್ರನ ಕೈ ಸೇರ್ಪಡೆ ಬಗ್ಗೆ ರೆಡ್ಡಿ ಹೇಳಿದ್ದೇನು..? ರೆಡ್ಡಿ ಮಾತಿಗೆ ರಾಮುಲು ಕೊಟ್ಟ ಕೌಂಟರ್ ಕೊಟ್ಟಿದ್ದಾರೆ. ಒಂದು ಕಾಲದ ಆಪ್ತಮಿತ್ರರ ಮಧ್ಯೆ ನಾನಾ-ನೀನಾ ಯುದ್ಧ ಶುರುವಾಗಿದೆ. ಮಾಜಿ ದೋಸ್ತಿ ವಿರುದ್ಧ ರೆಡ್ಡಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ದೋಸ್ತಿಗಳಾಗಿದ್ದವರು 'ದುಷ್ಮನ್'ಗಳಾದ ಕಥೆ ಇದು.