ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಕಾಂಗ್ರೆಸ್ ನಾನಾ ಕಸರತ್ತು ನಡೆಸಿದ್ದು, ಇದೀಗ ಬಿಜೆಪಿ ಪಾಪದ ಪತ್ರ ಹಾಗೂ ಪಾಪದ ಪುರಾಣ ಅಭಿಯಾನವನ್ನು ಆರಂಭಿಸಿದೆ.
ಬಿಜೆಪಿಯ ಪುಸ್ತಕ ಬಡಿದಾಟಕ್ಕೆ ಕಾಂಗ್ರೆಸ್ ಮಹಾ ಅಸ್ತ್ರ ಪ್ರಯೋಗಿಸಿದ್ದು, ಬಿಜೆಪಿಯ ಪಾಪದ ಪುರಾಣ ತಿಳಿಸಲೆಂದು ಬಸ್ ಯಾತ್ರೆ ಆರಂಭಿಸಿದೆ. ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ಸರ್ಕಾರ ರಚನೆಯಾಯಿತು. 40% ಸರ್ಕಾರ ಎಂಬ ಕುಖ್ಯಾತಿ ಇದೆ. ಒಂದುವರೆ ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಈ ಸರ್ಕಾರದಿಂದ ಹಾಲು, ಮೊಸರಿನಿಂದ ಹಿಡಿದು ಎಲ್‌ಪಿಜಿ ಪೆಟ್ರೊಲ್ ತನಕ ಬೆಲೆ ಜಾಸ್ತಿ ಆಗಿದೆ. ಜನಸಾಮನ್ಯರು ತತ್ತರಿಸಿ ಹೋಗಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಎರಡುವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನು ಹಣದ ದುರಾಸೆಗೆ ಖಾಲಿ ಉಳಿಸಿಕೊಂಡಿದ್ದಾರೆ. ಹೀಗೆ ಹೀಗೆ ಹಲವು ವಿಷಯಗಳನ್ನು ಈ ಬಿಜೆಪಿ ಪಾಪದ ಪತ್ರ ಹಾಗೂ ಪಾಪದ ಪುರಾಣ ಒಳಗೊಂಡಿದೆ.