ಹೊಸ ವರ್ಷಕ್ಕೆ ಬಿಜೆಪಿಯು ಹೊಸ ರಣತಂತ್ರ ಹೆಣೆದಿದ್ದು, ರಾಜ್ಯಕ್ಕೆ ಬಂದು ಹೋದ ಅಮಿತ್ ಶಾ ಟಾಸ್ಕ್ ಒಂದನ್ನು ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ರಾಜ್ಯದಲ್ಲಿ ಜಾತಿ ಸಮೀಕರಣಕ್ಕೆ ಬಿಜೆಪಿ ಪ್ಲಾನ್ ನಡೆಸಿದೆ. ತಂತ್ರಗಾರಿಕೆ ಸಲುವಾಗಿ ಎಷ್ಟೇ ಸಲ ಕರೆದರೂ ರಾಜ್ಯಕ್ಕೆ ಬರುವೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಜಾತಿಗೆ ಆದ್ಯತೆ ನೀಡದಿದ್ದರೆ ಬಹುಮತ ಕಷ್ಟ. ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ, ಸಮರ್ಥರು ಇಲ್ಲದಿದ್ದರೆ ಬೇರೆ ಪಕ್ಷದಿಂದ ನಾಯಕರನ್ನು ಕರೆತನ್ನಿ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ವಿಶೇಷ ಗಮನ ನೀಡುವಂತೆ ಶಾ ಸೂಚನೆ ನೀಡಿದ್ದಾರೆ. ಯಾವುದೇ ಸಮುದಾಯಕ್ಕೆ ಕಡೆಗಣಿಸಿದ ಭಾವನೆ ಬರದಂತೆ ನೋಡಿ. ಇಂತವರಿಗೇ ಟಿಕೆಟ್ ಏಕೆ ಎಂಬ ಬಗ್ಗೆ ನನಗೂ ಸಮರ್ಥನೆ ನೀಡಿ ಎಂದು ಸೂಚನೆಯನ್ನು ನೀಡಿದ್ದಾರೆ.