Assembly Election: ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ!

Feb 4, 2023, 10:50 AM IST

ಬೆಂಗಳೂರು (ಫೆ.04): ಕುಬೇರನ ಮೂಲೆಯಿಂದಲೇ ಶುರು ಬಂಡೆ ದಂಡಯಾತ್ರೆ..! ಕುರುಡುಮಲೆ ಗಣೇಶನ ಸನ್ನಿಧಾನದಿಂದ ದಿಗ್ಗಜರ ದಿಗ್ವಿಜಯ..! ಡಿಕೆಶಿ.. ಸಿದ್ದು.. ಕುಮಾರಣ್ಣ..ಯಾರಿಗೆ ರಾಜಪಟ್ಟ ಎನ್ನುವುದರ ವಿಶೇಷ ವರದಿ ಇಲ್ಲಿದೆ ನೋಡಿ..

ಕುರುಡುಮಲೆ ಕುರುಕ್ಷೇತ್ರ... ಇದು ರಾಜ್ಯದ ಮೂವರು ದಿಗ್ಗಜರ ಮಧ್ಯೆ ಶುರುವಾಗಿರೋ ಕುರುಕ್ಷೇತ್ರ... ಅವತ್ತು ದೇವೇಗೌಡರು, ಎಸ್.ಎಂ ಕೃಷ್ಣ ಮತ್ತು ಸಿದ್ದರಾಮಯ್ಯ. ಇವತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ. ಇವರೇ ಕುರುಡುಮಲೆ ಕುರುಕ್ಷೇತ್ರದ ತ್ರಿಮೂರ್ತಿಗಳು. ಕುರುಡುಮಲೆ, ಕುಬೇರನ ಮೂಲೆ ಮತ್ತು ಮುಖ್ಯಮಂತ್ರಿ ಪಟ್ಟ. ಏನಿದರ ರಹಸ್ಯ..? ಏನಿದು ಕುರುಡುಮಲೆ ಕುರುಕ್ಷೇತ್ರ..?  1994ರಲ್ಲಿ ದೇವೇಗೌಡರು, 1999ರಲ್ಲಿ ಎಸ್.ಎಂ ಕೃಷ್ಣ, 2013ರಲ್ಲಿ ಸಿದ್ದರಾಮಯ್ಯ. ದಿಗ್ಗಜರಿಗೆ ಒಲಿದ ಕುರುಡುಮಲೆ ಗಣೇಶನ ಅನುಗ್ರಹ ಈ ಬಾರಿ ಯಾರಿಗೆ..? ಸಿದ್ದರಾಮಯ್ಯವರಿಗಾ, ಡಿಕೆಶಿಯವರಿಗಿ, ದಳಪತಿಗಾ..? ಎನ್ನುವುದು ರಾಜ್ಯ ಎಲ್ಲ ಮತದಾರರ ಪ್ರಶ್ನೆಯಾಗಿದೆ.

ಕಾಂಗ್ರೆಸ್‌ನ ನಾಲ್ವರಿಗೆ ಟಿಕೆಟ್ ಕೈತಪ್ಪುವ ಭೀತಿ, ಜೋರಾಯ್ತು ಜಾರಕಿಹೊಳಿ ಸಿಡಿ ಜಟಾಪಟಿ!

ಇದು ರಾಜ್ಯ ರಾಜಕಾರಣದಲ್ಲಿ ಶುರುವಾಗಿರೋ ಕುರುಡುಮಲೆ ಕುರುಕ್ಷೇತ್ರದ ರೋಚಕ ಸ್ಟೋರಿ. ಎರಡು ಪಕ್ಷಗಳ ಮೂವರು ದಿಗ್ಗಜ ನಾಯಕರ ಮಧ್ಯೆ ಸಿಎಂ ಕುರ್ಚಿಗಾಗಿ ನಡೀತಾ ಇರೋ ಚದುರಂಗದಾಟ. ತ್ರಿಮೂರ್ತಿಗಳಲ್ಲಿ ಕುರುಡುಮಲೆ ಕುರುಕ್ಷೇತ್ರ ಗೆಲ್ಲೋರು ಯಾರು..?ದೇವೇಗೌಡ್ರು, ಎಸ್.ಎಂ ಕೃಷ್ಣ, ಸಿದ್ದರಾಮಯ್ಯಗೆ ಒಲಿದ ಕುರುಡುಮಲೆ ಗಣೇಶನ ಅನುಗ್ರಹ ಈ ಬಾರಿ ಯಾರ ಮೇಲೆ..? ಮತ್ತೆ ಸಿದ್ದುನಾ..? ಡಿಕೆ ಸಾಹೇಬನಾ.., ದಳಪತಿನಾ..? ಕಾದು ನೋಡೋಣ.