Jan 14, 2023, 2:56 PM IST
ಇದು ಮಾಜಿ ಸಚಿವ ಮೈಸೂರಿನ ವರ್ಣರಂಜಿತ ರಾಜಕಾರಣಿ, ಹಳ್ಳಿ ಹಕ್ಕಿ ಹೆಚ್. ವಿಶ್ವನಾಥ್ ಅವರ ಜಂಪಿಂಗ್ ಪುರಾಣ. ಕಾಂಗ್ರೆಸ್‌ನಿಂದ ಜೆಡಿಎಸ್, ಜೆಡಿಎಸ್‌ನಿಂದ ಬಿಜೆಪಿ. ಇದೀಗ ಬಿಜೆಪಿಯಿಂದ ಮತ್ತೆ ಕಾಂಗ್ರೆಸ್. ಅಷ್ಟಕ್ಕೂ ಸಿದ್ದರಾಮಯ್ಯ ಅಂದ್ರೆ ಸಿಡಿದು ಬೀಳುತ್ತಿದ್ದ ಹಳ್ಳಿಹಕ್ಕಿಯ ಅಸಲಿ ಕಥೆ ಇಲ್ಲಿದೆ. ವಿಶ್ವನಾಥ್ ರಾಜಕಾರಣಿಯು ಹೌದು, ಪೆನ್ನು ಹಿಡಿದರೆ ಬರಹಗಾರರು ಹೌದು. ನಾಲ್ಕು ಬಾರಿ ಶಾಸಕ, ಎರಡು ಬಾರಿ ಮಂತ್ರಿ, ಒಮ್ಮೆ ಸಂಸದ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯ ಇದು ಹಳ್ಳಿ ಹಕ್ಕಿ ರಾಜಕೀಯ ಹೆಜ್ಜೆಯ ಸಂಕ್ಷಿಪ್ತ ಚಿತ್ರಣ. ರಾಜ್ಯ ರಾಜಕಾರಣದಲ್ಲಿ ವಿಶ್ವನಾಥ್ ಹಳ್ಳಿ ಹಕ್ಕಿ ಎಂದು ಫೇಮಸ್. ಹೆಸರಿಗೆ ತಕ್ಕ ಹಾಗೆ ಇವರು, ಕುಕ್ಕೋದಕ್ಕೂ ಫೇಮಸ್. ಮಾತಿಗೆ ನಿಂತ್ರೆ ಅಂದು ಸಿದ್ದರಾಮಯ್ಯ ವಿರುದ್ಧ ಗುಡುಡಿದ್ದ ಹೆಚ್. ವಿಶ್ವನಾಥ್, ಇಂದು ಸಿದ್ದರಾಮಯ್ಯಗೆ ಜೈ ಹೇಳಿ ಕಾಂಗ್ರೆಸ್'ಗೆ ಬಹುಪರಾಕ್ ಅಂದಿದ್ದಾರೆ.ಮುಲಾಜಿಲ್ಲದೆ ಮಾತಾಡುವ ಮನುಷ್ಯ. ಮನಸ್ಸಿಗೆ ಅನಿದ್ದನ್ನು ಖಡಕ್ ಆಗಿ ಹೇಳುವುದು ವಿಶ್ವನಾಥ್ ಸ್ಪೆಷಲ್.