ಸಿದ್ದು ಕೋಲಾರ ಸ್ಪರ್ಧೆಯ ಲೆಕ್ಕಾಚಾರ ಏನು?: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪೆಟ್ಟು?

Jan 10, 2023, 12:43 PM IST

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಮುಂದಾಗಿದ್ದು, ಆದರೆ  ಬಿಜೆಪಿ ಸಂಘಟನೆಗೆ ಪೆಟ್ಟು ನೀಡಲು ಕಾಂಗ್ರೆಸ್‌ ಸ್ಕೆಚ್‌ ಹಾಕಿದೆ. ಹಳೇ ಮೈಸೂರು ಭಾಗದ ಜಿಲ್ಲೆಯಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿದ್ದು, ಇದರ ಹಿಂದೆ ಬೇರೆ ಲೆಕ್ಕಾಚಾರ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಪಕ್ಷ ಸಂಘಟನೆಗಾಗಿ ಬಿಜೆಪಿ ವರ್ತೂರ್ ಪ್ರಕಾಶ್ ಅವರನ್ನು ತಂದಿದೆ. ಆದರೆ ಕೋಲಾರದಲ್ಲಿ ಬಿಜೆಪಿ ಪಕ್ಷದ ಒಬ್ಬನೇ ಒಬ್ಬ ಶಾಸಕನಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಿದ್ದರಾಮಯ್ಯ ಪ್ರಬಲ ಹಿಡಿತ ಸಾಧಿಸಿದ್ದಾರೆ. ಕೋಲಾರದ 6 ಕ್ಷೇತ್ರಗಳಲ್ಲಿ 4 ಸ್ಥಾನ ಗೆದ್ದಿರುವ ಕಾಂಗ್ರೆಸ್‌, ಚಿಕ್ಕಬಳ್ಳಾಪುರದ 5 ಕ್ಷೇತ್ರದಲ್ಲಿ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಹಳೇ ಮೈಸೂರಿನಲ್ಲಿ ಪಕ್ಷ ಸಂಘಟನೆಯಲ್ಲಿರುವ ಬಿಜೆಪಿಗೆ ಹಿನ್ನೆಡೆ ಸಾಧ್ಯತೆಯಿದೆ.

ನಾನು ಸ್ವಲ್ಪ ಬದಲಾಗಿದ್ರೆ ಎರಡು ಸಲ ರಾಜ್ಯದ ಸಿಎಂ ಆಗ್ತಿದ್ದೆ: ವಾಟಾಳ್ ನಾಗರಾಜ್