ರಾಜ್ಯ ಬಿಜೆಪಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 189 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. 10 ಹಾಲಿ ಶಾಸಕರು ಈ ಬಾರಿ ಟಿಕೆಟ್ ತಪ್ಪಿಸಿಕೊಂಡಿದ್ದಾರೆ.
ಬೆಂಗಳೂರು (ಏ.10): ನಿರೀಕ್ಷೆಯಂತೆ ಬಿಜೆಪಿ 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡಿ ಮೊದಲ ಪಟ್ಟಿ ರಿಲೀಸ್ ಮಾಡಿದೆ. ಇದರಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಅವಕಾಶ ನೀಡಿದೆ. 10 ಹಾಲಿ ಶಾಸಕರು ತಮ್ಮ ಟಿಕೆಟ್ ತಪ್ಪಿಸಿಕೊಂಡಿದ್ದಾರೆ.
ಬಿಜೆಪಿ ಹೊಸಮುಖಗಳನ್ನು ಪರಿಚಯಿಸಿದ್ದಾಗಿ ಹೇಳಿದ್ದರೂ, ಮೊದಲ ಲಿಸ್ಟ್‌ನಲ್ಲಿ ಅಚ್ಚರಿ ಎನ್ನುವಂಥ ಯಾವುದೇ ಅಂಶಗಳು ಕಾಣುತ್ತಿಲ್ಲ. ಹೊಸದುರ್ಗದಿಂದ ಟಿಕೆಟ್ ತಪ್ಪಿಸಿಕೊಂಡ ಗೂಳಿಹಟ್ಟಿ ಶೇಖರ್ ಅವರದ್ದು ಅಚ್ಚರಿ. ಉಳಿದಂತೆ ಕಾಪು, ಸುಳ್ಯ ಹಾಗೂ ಪುತ್ತೂರಿನಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಅನ್ನೋದು ಮೊದಲೇ ನಿರ್ಧಾರವಾಗಿತ್ತು.
Party Rounds: ಇಂದು ರಾತ್ರಿಯೊಳಗೆ ಕಾಂಗ್ರೆಸ್ 3ನೇ ಪಟ್ಟಿ ಸಿದ್ಧ: ದಿಢೀರ್ ಗುಪ್ತ ಸಭೆ
ಜಗದೀಶ್ ಶೆಟ್ಟರ್, ಅರವಿಂದ್ ಲಿಂಬಾವಳಿ, ರಾಮದಾಸ್, ನೆಹರು ಓಲೇಕಾರ್, ಎಂಪಿ ಕುಮಾರಸ್ವಾಮಿ, ಸುಕುಮಾರ್ ಶೆಟ್ಟಿ, ಕಳಕಪ್ಪ ಬಂಡಿ ಸೇರಿದಂತೆ ಇನ್ನೂ ಹಲವರ ಟಿಕೆಟ್ ನಿರೀಕ್ಷೆ ಇನ್ನೂ ಉಳಿದುಕೊಂಡಿದೆ. ಲಕ್ಷ್ಮಣ್ ಸವದಿ, ಮುದ್ದಹನುಮೇಗೌಡ, ಆರ್.ಶಂಕರ್, ಸೊಗಡು ಶಿವಣ್ಣ, ಕೆ.ಶಿವರಾಮ್, ಎನ್‌ಆರ್ ರಮೇಶ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಮಿಸ್ ಆದ ಪ್ರಮುಖರಾಗಿದ್ದಾರೆ.