ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ.
ಮಂಗಳೂರು: ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ. ಖಾದರ್ ವಿರುದ್ಧವೇ ಎಸ್‌ಡಿಪಿಐ ಸಮರ ಸಾರಿದೆ. ಯು.ಟಿ. ಖಾದರ್ ವಿರುದ್ಧ ಉಳ್ಳಾಲದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್ ಅವರು ಈಗ ಖಾದರ್ ವಿರುದ್ಧ ಅಕ್ರಮದ ಆರೋಪ ಮಾಡಿದ್ದಾರೆ. ಯುಟಿ ಖಾದರ್ 3500 ಕೋಟಿಯ ಅಧಿಕೃತ ಒಡೆಯ 10 ಸಾವಿರ ಕೋಟಿಗಳ ಅನಧಿಕೃತ ಒಡೆಯ ಎಂದು ರಿಯಾಜ್ ಆರೋಪಿಸಿದ್ದಾರೆ.