Dec 31, 2022, 11:23 AM IST
ಒಂದು ಕಡೆ ಬಿಜೆಪಿ ರಣತಂತ್ರ ಮೇಲೆ ರಣತಂತಂತ್ರ ಹಣೆದು ಹಳೇ ಮೈಸೂರನ್ನು ಯಾವ ರೀತಿ ಬುಟ್ಟಿಗೆ ಹಾಕಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್'ನಲ್ಲಿ ಬಣ ಬಡಿದಾಟ ನಡೆಯುತ್ತಿದೆ. ಕೋಲಾರದಿಂದ ಸಿದ್ದರಾಮಯ್ಯ ಅವರು ನಿಲ್ಲುತ್ತಾರಂತೆ ಎಂದು ಈಗಾಗಲೇ ಬಹಳಷ್ಟು ಭಾರಿ ಮಾಹಿತಿಗಳು ಬಂದಿದ್ದವು. ಅವರು ಕೂಡಾ ಕೋಲಾರಕ್ಕೆ ಹೋಗಿದ್ರು. ಆದ್ರೆ ಅಲ್ಲಿರುವ ಬಣ ಬಡಿದಾಟಕ್ಕೆ ಇತಿಶ್ರೀ ಹಾಡುವವರು ಯಾರು ಇಲ್ಲ. ರಮೇಶ್ ಕುಮಾರ್ ಬಣ Vs ಮುನಿಯಪ್ಪ ಬಣ ಬಡಿದಾಟ ಮಾಡುತ್ತಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ಬಡಿದಾಟ ನಡೆದಿದೆ. ವೀರಪ್ಪ ಮೊಯ್ಲಿ ಅಡ್ಡಹಾಕಿ ರಮೇಶ್ ಕುಮಾರ್ ಬಣ ಮುನಿಯಪ್ಪ ಬಣ ಬಡಿದಾಟ ಮಾಡುತ್ತಿದ್ದಾರೆ. ಎರಡು ಬಣ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಕಾಂಗ್ರೆಸ್ ಕಚೇರಿಯಲ್ಲಿ ಹೈ ಡ್ರಾಮಾ ನಡೆದಿದೆ. ಸಿದ್ದರಾಮಯ್ಯಗೆ ಟಿಕೆಟ್ ನೀಡಲು ರಮೇಶ್ ಬಣ ಪಟ್ಟು ಹಿಡಿದಿದೆ. ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಮುನಿಯಪ್ಪ ಬಣ ಪಟ್ಟು ಇದ್ದು, ಮುನಿಯಪ್ಪ ಮುಂದೆಯೇ ಹೈಡ್ರಾಮಾ ನಡೆದು, ಪರಸ್ಪರ ಎರಡು ಬಣದಿಂದ ಜೈಕಾರ ಕೂಗಾಟ ಹಾಕಲಾಗಿದೆ.