ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, 2023ರ ಎಲೆಕ್ಷನ್ ಗೆಲ್ಲೋಕೆ ಕುಮಾರಸ್ವಾಮಿಯ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದಾರೆ.
ಮತ್ತೊಮ್ಮೆ ಸಿಎಂ ಆಗಲು ಕುಮಾರಸ್ವಾಮಿ ಕಸರತ್ತು ನಡೆಸುತ್ತಿದ್ದಾರೆ. ನುಡಿದಂತೆ ನಾವು ನಡೆದಿದ್ದೇವೆ, ಮಂದೆಯೂ ನಡೆಯುತ್ತೇವೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಕೊಟ್ಟರೆ ಇನ್ನಷ್ಟು ಯೋಜನೆ ಮಾಡಲಿದ್ದೇವೆ ಒಂದು ಅವಕಾಶ ಕೊಡಿ ಎಂದು ಹೆಚ್‌ಡಿಕೆ ಪತ್ರ ಬರೆಯಲು ಮುಂದಾಗಿದ್ದಾರೆ. ಸಾಲಮನ್ನಾ ಫಲಾನುಭವಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದು, ಪಂಚರತ್ನ ಯಶಸ್ವಿ ಆದ ಬೆನ್ನಲ್ಲೇ ಪತ್ರ ಬರೆಯಲು ಹೆಚ್‌ಡಿಕೆ ಮುಂದಾಗಿದ್ದಾರೆ.