May 10, 2023, 12:16 PM IST
ಮೈಸೂರು(ಮೇ.10): ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ರಾಜ್ಯದ ವಿಧಾನಸಭೆಯ 224 ಸ್ಥಾನಗಳಿಗೆ ಬುಧವಾರ ರಾಜ್ಯಾದ್ಯಂತ ಒಂದೇ ಹಂತದ ಚುನಾವಣೆ ನಡೆಯುತ್ತಿದೆ. ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದರು.
ಮತದಾನ ಚೆನ್ನಾಗಿ ನಡೆಯುತ್ತಿದೆ. ಜನರು ಮತ ಚಲಾಯಿಸಲು ಬರುತ್ತಿರುವುದು ನೋಡಿ ಖುಷಿಯಾಯಿತು. ಮತದಾನ ಮಾಡಿ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿ. ನಾವು ಪ್ರಜಾಪ್ರಭುತ್ವದ ಭಾಗವಾಗಬೇಕು. ಮೊದಲ ಬಾರಿಗೆ ವೋಟ್ ಮಾಡುವವರಿಗೆ ಯಾರು ನಮಗೆ ಬೇಕು ಎಂದು ತೀರ್ಮಾನಿಸಲು ಇದು ಸರಿಯಾದ ಸಮಯ ಎಂದು ಮೈಸೂರ್ ಎಕ್ಸ್‌ಪ್ರೆಸ್ ಖ್ಯಾತಿಯ ಶ್ರೀನಾಥ್ ಹೇಳಿದ್ದಾರೆ.