ಪಂಚರತ್ನ ಯಾತ್ರೆಯ ಮೂಲಕ ಮಂಡ್ಯದಲ್ಲಿ ಕುಮಾರಸ್ವಾಮಿ ಹವಾ ಎಬ್ಬಿಸಿದ್ದು, ಹಾಗಾದ್ರೆ ಈ ಬಾರಿಯೂ ಮಂಡ್ಯದಲ್ಲಿ ಜೆಡಿಎಸ್ ಆಟ ನಡೆಯುತ್ತಾ ಎಂಬ ಪ್ರಶ್ನೆ ಮೂಡಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರಗಳನ್ನು ಗೆದ್ದು ಬೀಗಿತ್ತು .ಇದೀಗ ದಳಪತಿ ಕುಮಾರಸ್ವಾಮಿ ಮತ್ತೆ ಅಂಥದ್ದೇ ಗೆಲುವನ್ನು ಎದುರು ನೋಡ್ತಿದ್ದಾರೆ. ಈ ಬಾರಿ ನಾವು ಕಿಂಗ್ ಮೇಕರ್ ಆಗಲ್ಲ, ಕಿಂಗ್ ಆಗ್ತೀವಿ ಅಂತ ದಳಪತಿ ಕುಮಾರಸ್ವಾಮಿ ಹೇಳ್ತಿದ್ದಾರೆ. ತಮ್ಮ ಪಂಚರತ್ನ ಯೋಜನೆ, ಜೆಡಿಎಸ್'ಗೆ ಪೂರ್ಣ ಬಹುಮತ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಕುಮಾರಸ್ವಾಮಿಯವರ ಬತ್ತಳಿಕೆಯಿಂದ ಸಿಡಿದಿರೋ ಪಂಚರತ್ನಗಳಿಗೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸೋ ಶಕ್ತಿ ಇದೆಯೇ ಎಂಬ ಸಂಪೂರ್ಣ ಈ ವಿಡಿಯೋದಲ್ಲಿದೆ.