ದೇಶ ಕಟ್ಟಲು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ: ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ

Sep 9, 2023, 1:15 PM IST

ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಬಿಜೆಪಿ(BJP) ಮತ್ತು ಜೆಡಿಎಸ್(JDS) ಮೈತ್ರಿ ವಿಚಾರವನ್ನು ಮಾಧ್ಯಮದಲ್ಲಿ ಗಮನಿಸಿದ್ದೇವೆ. ಜೆಡಿಎಸ್‌ ವಿರುದ್ಧವಾಗಿ ನಾರಾಯಣಗೌಡ, ಅಶೋಕ್ ಜಯರಾಂ ಸಿಡಿದೆದ್ದು ಬಂದಿದ್ದಾರೆ. ನಾವು ಸಹ ಜೆಡಿಎಸ್ ವಿರುದ್ಧ ಚುನಾವಣೆ ಮಾಡಿಕೊಂಡು ಬಂದಿದ್ದೇವೆ. ಸದ್ಯ ಮಂಡ್ಯ ಎಂಪಿ ಸಹ ಬಿಜೆಪಿ‌ ಬೆಂಬಲಿತರು ಎಂದು ಮಂಡ್ಯದಲ್ಲಿ ಸುಮಲತಾ(Sumalatha) ಆಪ್ತ ಇಂಡುವಾಳು ಸಚ್ಚಿದಾನಂದ(Induvalu Satchidananda) ಹೇಳಿದ್ದಾರೆ. ಕಳೆದ ಎಂಎಲ್‌ಎ ಚುನಾವಣೆಯಲ್ಲಿ‌ ಬಿಜೆಪಿ ಪರ ಸುಮಲತಾ ಅವರು ಕೆಲಸ‌ ಮಾಡಿದ್ದಾರೆ. ಸುಮಲತಾ ಅವರು ಈ ಬಗ್ಗೆ ಏನು ಹೇಳ್ತಾರೆ ಗೊತ್ತಿಲ್ಲ. ನಾವು ಕೆಲ ತಿಂಗಳ ಹಿಂದೆ ಅಷ್ಟೇ ಚುನಾವಣೆ ಮುಗಿಸಿದ್ದೇವೆ. ಇಡೀ ದೇಶವೇ ಭಾರತವನ್ನು ತಿರುಗಿ ನೋಡ್ತಾ ಇದೆ. ಇದಕ್ಕೆ ಕಾರಣ ಮೋದಿ , ಬಿಜೆಪಿ ಪಕ್ಷದ ನಾಯಕತ್ವ. ಪಕ್ಷ ಮಾಡುವ ತೀರ್ಮಾನಕ್ಕೆ ನಾವು ಬದ್ಧ. ಮೈತಿ ಅನ್ನೋದು ನಮಗೆ ಅಧಿಕೃತ ಆಗಿಲ್ಲ. ಈ ರೀತಿ ತೀರ್ಮಾನ ಆದ್ರೆ ನಮ್ಮನ್ನ ಕರೆದು ಮಾತಾಡುತ್ತಾರೆ. ಮುಖ್ಯವಾಗಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ಅವರು ಹೇಳಿದರು.

ದೇಶ ಕಟ್ಟಲು ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ. ಆಲೋಚನೆ ಮಾಡಿ ಪಕ್ಷದ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾರ್ಯಕರ್ತರ ಭಾವನೆಗೆ ಧಕ್ಕೆ ತರದ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲು ಒಳ್ಳೆಯ ನಿರ್ಧಾರವಾಗುತ್ತೆ. ಸುಮಲತಾ ಅವರು ಈಗ ಮಂಡ್ಯ ಎಂಪಿ. ನಾನು ಸುಮಲತಾ ಅವರ ಬೆಂಬಲಿಗನೂ‌ ಹೌದು, ಆಪ್ತನೂ ಹೌದು. ಈಗ ನಾನು ಪಕ್ಷದ ಚೌಟ್ಟಿನಲ್ಲಿ ಇದ್ದೀನಿ. ಬಿಜೆಪಿ ಏನು ತೀರ್ಮಾನ ಮಾಡುತ್ತೆ ಅದಕ್ಕೆ ನಾನು ಬದ್ಧ. ನಾನು ಬಿಜೆಪಿಯ ಕಾರ್ಯಕರ್ತ ಬಿಜೆಪಿ ಸಿದ್ದಾಂತಕ್ಕೆ ಬದ್ಧ ಎಂದು ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಜೆಡಿಎಸ್‌ ಮೈತ್ರಿ: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಕುಮಾರಸ್ವಾಮಿ ಮಾತು