ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

Published : Jul 14, 2023, 01:05 PM IST

ಸದನದ ಗದ್ದಲದ ಹಿಂದಿದೆಯಾ ಮಂಡ್ಯ ಪಾಲಿಟಿಕ್ಸ್ ರಿವೆಂಜ್..?
ಕಾಂಗ್ರೆಸ್ಸಿನ ಇನ್ನೊಂದು ಟೀಂ ಬಗ್ಗೆ ಸೂಚನೆ ಕೊಟ್ಟ ಹೆಚ್.ಡಿ.ಕೆ..!
ಮಾಜಿ ಭದ್ರಕೋಟೆಯ ಮರುಹಿಡಿತಕ್ಕೆ ಮಾಜಿ ಸಿಎಂ ಪ್ಲ್ಯಾನ್..?

ಸದನದಲ್ಲಿ ಅತ್ಯಂತ ಹೆಚ್ಚು ಆಕ್ಟೀವ್ ಆಗಿ ಯಾರಾದ್ರೂ ಕಾಣಿಸ್ತಾ ಇದ್ರೆ ಅದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy). ಆಡಳಿತರೂಢ ಕಾಂಗ್ರೆಸ್(Congress) ಮೇಲೆ ಪ್ರತಿ ದಿನವೂ ಕೂಡ ವಾಗ್ದಾಳಿ ನಡೆಸ್ತಾನೇ ಇದ್ದಾರೆ. ಒಂದೇ ವಾರದ ಹಿಂದೆ ಹೆಚ್ ಡಿ ಕೆ ಸ್ಪೋಟಿಸಿದ್ದ ಪೆನ್ ಡ್ರೈವ್(Pendrive) ಬಾಂಬ್ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಅದೊಂದು ಆರೋಪಕ್ಕೆ ಪೂರಕವಾಗಿ ಇನ್ನೊಂದು ದಾಖಲೆಯನ್ನ ಬಿಡುಗಡೆ ಮಾಡಿ ಮತ್ತೆ ದೊಡ್ಡ ಸದ್ದು ಮಾಡಿದ್ದಾರೆ ಕುಮಾರಸ್ವಾಮಿ. ಕೆಲವೇ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರು ಹಾಕಿದ್ದ ಪೆನ್ ಡ್ರೈ ವ್ ಬಾಂಬ್ ಭಾರಿ ಸದ್ದು ಮಾಡಿತ್ತು. ಪೆನ್ ಡ್ರೈವ್ ತೋರಿಸಿ ಹೆಚ್ ಡಿಕೆ ಕಾಂಗ್ರೆಸ್ಸಿಗರನ್ನ ಬೆದರಿಸೋ ಯತ್ನವನ್ನ ಮಾಡ್ತಾ ಇದಾರಾ ಅನ್ನೋ ಅನುಮಾನವೂ ಮೂಡಿತ್ತು. ಕೆಂಪು ಬಣ್ಣದ ಪೆನ್ ಡ್ರೈವ್ ಸರ್ಕಾರದಲ್ಲಿ ನಡೀತಾ ಇರೋ ಭ್ರಷ್ಟಾಚಾರದ ಬಣ್ಣವನ್ನ ಕಳಚುತ್ತೆ ಅನ್ನೋ ಅರ್ಥದಲ್ಲಿ ಕುಮಾರಸ್ವಾಮಿ ಮಾತನ್ನಾಡಿದ್ರು. ಪೆನ್‌ಡ್ರೈವ್ ತೋರಿಸಿ ಸಂಚಲನ ಮೂಡಿಸಿದ್ದ ಎಚ್ಡಿಕೆ ದಾಖಲೆ ಕೊನೆಗೂ ಸ್ಫೋಟಗೊಂಡಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಅಂತ ಎಚ್ಡಿಕೆ ಆರೋಪ ಮಾಡಿದ್ರು. ದಾಖಲೆ ಬಿಡಿ ಅಂತ ಕಾಂಗ್ರೆಸ್ನವ್ರೂ ಸವಾಲ್ ಹಾಕ್ತಿದ್ರು. ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ಸದ್ಯ ದಾಖಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆರ್‌ಎಸ್ಎಸ್‌ಗೆ ಸರ್ಕಾರದಿಂದ ಬಿಗ್‌ ಶಾಕ್‌: ಭೂಮಿ ಹಸ್ತಾಂತರಕ್ಕೆ ತಡೆ

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more