Feb 3, 2024, 4:37 PM IST
ಮಂಡ್ಯಕ್ಕಾಗಿ ಸ್ವಾಮಿಯುದ್ಧ. ಇದು ಒಂದು ಕಾಲದ ದೋಸ್ತಿಗಳು ದುಷ್ಮನ್‌ಗಳಾಗಿ ನಿಂತಿರೋ ರೋಚಕ ಕಥೆ. ಇಲ್ಲಿ ನಡೀತಾ ಇರೋದು ಮಂಡ್ಯ ಕಿರೀಟಕ್ಕಾಗಿ ರಣಭಯಂಕರ ಕಾಳಗ. ಇಂಡಿಯಾದ ಕಿಡಿ ಕಿಚ್ಚಿನ ನೆಲ ಮಂಡ್ಯ(Mandya) ರಣಭೂಮಿಯಲ್ಲಿ ಶುರುವಾಗಿರೋ ಸ್ವಾಮಿ ಕಾಳಗ. ಕಣಕಣದಲ್ಲೂ ರಾಜಕಾರಣದ ಕಿಚ್ಚನ್ನು ತುಂಬಿಕೊಂಡಿರೋ ಮಂಡ್ಯ ಜಿಲ್ಲೆ ಕಳೆದ ನಾಲ್ಕೈದು ದಿನಗಳಿಂದ ಭರ್ಜರಿ ಸುದ್ದಿಯಲ್ಲಿದೆ. ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಪ್ರಕರಣ ಇಡೀ ಮಂಡ್ಯ ರಾಜಕಾರಣದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಠಿಸಿ ಬಿಟ್ಟಿದೆ. ಮಂಡ್ಯದಲ್ಲಿ ಬಿಜೆಪಿ(BJP)-ಜೆಡಿಎಸ್(JDS) ನಡೆಸಿದ ಜಂಟಿ ಪಾದಯಾತ್ರೆ, ಹನುಮ ಧ್ವಜದ ಕಿಚ್ಚಿನಿಂದ ಸಕ್ಕರೆ ನಾಡಿನ ರಾಜಕಾರಣ ಧಗಧಗಿಸ್ತಾ ಇದೆ. ಇಬ್ಬರು ಸ್ವಾಮಿಗಳು ಮಂಡ್ಯ ರಣಭೂಮಿಯಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(HD Kumaraswamy), ಇನ್ನೊಬ್ರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ(Chaluvarayaswamy).
ಇದನ್ನೂ ವೀಕ್ಷಿಸಿ: ಡಿ.ಕೆ ಸುರೇಶ್ ಬೆನ್ನಿಗೆ ನಿಂತವರು ಯಾರು..? ಭಾರತ ವಿಭಜನ ಮಾತಿಗೆ ಕೆರಳಿ ಕೆಂಡವಾಯ್ತು ಬಿಜೆಪಿ..!