Aug 6, 2023, 10:02 AM IST
ವಿದೇಶಿ ಪ್ರವಾಸ ಮುಗಿಸಿ ವಾಪಾಸ್ ಆಗಿರುವ ಹೆಚ್‌ಡಿ ಕುಮಾರಸ್ವಾಮಿ(HD Kumaraswamy),ಕಾಂಗ್ರೆಸ್(congress) ಹಾಗೂ ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಕಮಿಷನ್ ದಂಧೆ, ಕಲೆಕ್ಷನ್ ದಂಧೆ (ಸೇರಿದಂತೆ ಹಲವು ಆರೋಪ ಮಾಡಿದ್ದಾರೆ.ಇದರ ನಡುವೆ ಡಿ.ಕೆ .ಶಿವಕುಮಾರ್ ಹಾಗೂ ಹೆಚ್‌ಡಿಕೆ ನಡುವೆ ಅಣ್ತಮ್ಮ ಫೈಟ್ ಶುರುವಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಕಮಿಷನ್ ದಂಧೆ(commission scam) ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಜನರು ಮತ ಹಾಕಿ ಅಧಿಕಾರ ಕೊಟ್ಟಿದ್ದಾರೆ.ಅಣ್ಣ ಹೇಳಿದಂಗೆ ತಮ್ಮ ಕೇಳಬೇಕು ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.ಇತ್ತ ಹೆಚ್‌ಡಿಕೆ,ಅಂತಹ ತಮ್ಮ ಈ ಜನ್ಮದಲ್ಲಿ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಮಾಡಿರುವ ಆರೋಪ ಸೇರಿದಂತೆ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಇದನ್ನೂ ವೀಕ್ಷಿಸಿ: ಮಾತನಾಡುತ್ತಾ ನಿಂತವನಿಗೆ ಹೊಡೀತು ಕರೆಂಟ್ ಶಾಕ್ !: ಸಿಸಿಟಿವಿಯಲ್ಲಿ ವಿಡಿಯೋ ಸೆರೆ