Feb 7, 2023, 6:05 PM IST
ಚುನಾವಣೆಯ ನಂತರ ಮುಂದಿನ ದಿನಗಳಲ್ಲಿ ಪ್ರಲ್ಹಾದ್ ಜೋಷಿಯವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂದು ನಾನು ಹೇಳಿದ್ದೇನೆ. ಬ್ರಾಹ್ಮಣ ಸಮಾಜದಿಂದ ಮುಖ್ಯಮಂತ್ರಿ ಆಗಬಾರದು ಎಂದು ಹೇಳಲಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಬ್ರಾಹ್ಮಣ ಸಮಾಜದಿಂದಲೂ ಮುಖ್ಯಮಂತ್ರಿ ಆಗಬಹುದು, ಇನ್ನು ಯಾವುದೇ ಸಮಾಜದಿಂದಲೂ ಮುಖ್ಯಮಂತ್ರಿ ಆಗಬಹುದು. ಅದು ಈ ದೇಶದಲ್ಲಿ ಪ್ರತಿಯೊಂದು ಕುಟುಂಬಕ್ಕೆ, ಸಮಾಜಕ್ಕೆ ಕೊಟ್ಟಿರುವಂತ ಹಕ್ಕು ಅದನ್ನು ನಾನು ಖಂಡಿಸುವುದಿಲ್ಲ ಎಂದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಧರ್ಮದ ನಡುವೆ ದ್ವೇಷ ತರುವಂತದನ್ನು ಮಾಡಿದ್ದಾರೆ. ವಿರೋಧಿಗಳು ಏನೂ ಬೇಕಿದ್ರೂ ಟೀಕೆ ಮಾಡಲಿ, ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡುವ ನಿಟ್ಟಿನಲ್ಲಿ ನಾನು ಇರುವುದು. ನಾನು ನಿಖರ ಮಾಹಿತಿ ಆಧಾರದಲ್ಲೇ ಮಾತಾಡ್ತೀನಿ, ಸಂತೆ ಭಾಷಣ ಮಾಡಲ್ಲ ಎಂದು ಹೇಳಿದರು. ಅವರು ಕುಟುಂಬದ ಬಗ್ಗೆ ಪಕ್ಷದ ಬಗ್ಗೆ ಕಾರ್ಯಕ್ರಮದ ಬಗ್ಗೆ ಹೇಳಿರುವುದನ್ನು ಸ್ಪೋಟಿವ್ ಆಗಿ ತಗೊಂಡಿದ್ದೇನೆ. ವಾಸ್ತವ ಅಂಶ ಸತ್ಯಾಸತ್ಯತೆಯಿಂದ ಇದ್ದಾಗ ಮಾತ್ರ ನಾನು ಮಾತಾಡುತ್ತೇನೆ ಎಂದು ತಿಳಿಸಿದ್ದಾರೆ.