ಡಿಕೆ ಶಿವಕುಮಾರ್‌ ಕ್ಲಾಸ್ ಬಳಿಕ ಕೊನೆಗೂ ಈಶ್ವರಪ್ಪ ಬೆಂಬಲಿಗರ ವಿರುದ್ಧ FIR

Feb 20, 2022, 7:16 PM IST

ಶಿವಮೊಗ್ಗ, (ಫೆ.20): ಕೊನೆಗೂ ಸಚಿವ ಕೆಎಸ್ ಈಶ್ವವರಪ್ಪ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಹಾನಗರ ಪಾಲಿಕೆ ಸದಸ್ಯ ಸೇರಿದಂತೆ ಒಟ್ಟು 75 ಜನರ ವಿರುದ್ಧ ಕೇಸ್ ದಾಖಲಾಗಿದೆ. ಡಿಕೆ ಶಿವಕುಮಾರ್ ಅವರು ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಬೆಂಬಲಿಗರು ಬೈಕ್ ರ್ಯಾಲಿ ಮಾಡಿದ್ದರು. ಈ ಮೂಲಕ 144 ಸೆಕ್ಷನ್ ಉಲ್ಲಂಘನೆ ಮಾಡಿದ್ದರು. 

ಕಾಂಗ್ರೆಸ್ ಕಾರ್ಯಕರ್ತರ ಮೇಲೆ FIR ಹಾಕಿದ್ದಕ್ಕೆ ಎಸ್‌ಪಿಗೆ ಕರೆ ಮಾಡಿ ವಿವರಣೆ ಕೇಳಿದ ಡಿಕೆಶಿ

ಇನ್ನು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಕೇಸ್ ದಾಖಲಿಸಿದ್ದರು. ಇದರಿಂದ ಗರಂ ಆಗಿದ್ದ ಡಿಕೆ ಶಿವಕುಮಾರ್ ರ್ಯಾಲಿ ಮಾಡಿದವರ ಮೇಲೆ ಏಕೆ ಕ್ರಮವಿಲ್ಲ ಎಂದು ಶಿವಮೊಗ್ಗ ಎಸ್‌ಪಿಗೆ ಕರೆ ಮಾಡಿ ಪ್ರಶ್ನಿಸಿದ್ದರು.